ಕಡಪ(ಆಂಧ್ರಪ್ರದೇಶ):ಗರ್ಭಿಣಿಯೊಬ್ಬರು ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿ, ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದು, ನವಜಾತ ಶಿಶುಗಳು ಇದೀಗ ಅನಾಥವಾಗಿವೆ. ಆಂಧ್ರಪ್ರದೇಶದ ಕಡಪ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಕ್ರೂರಿ ಕೊರೊನಾ... ಅವಳಿ ಮಕ್ಕಳಿಗೆ ಜನ್ಮ ನೀಡಿ ಮಹಿಳೆ ಸಾವು, ಅನಾಥವಾದ ಶಿಶುಗಳು! - ಅವಳಿ ಮಕ್ಕಳಿಗೆ ಗರ್ಭಿಣಿ ಜನ್ಮ
ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿರುವ ಮಹಿಳೆಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
Women Gave birth to twins, died
ಸೋಂಕಿತೆಯು ಚಪಾಡು ಮಂಡಲ್ನ ಆಸ್ಪತ್ರೆಯಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಹೆರಿಗೆ ನಂತರ ಆಕೆ ಸಾವನ್ನಪ್ಪಿದ್ದಾಳೆ. ಮೃತದೇಹದ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ಅವಕಾಶ ನೀಡದ ಕಾರಣ ಬೇರೊಂದು ಸ್ಥಳದಲ್ಲಿ ಅಂತಿಮ ವಿಧಿ-ವಿಧಾನ ನಡೆಸಲಾಗಿದೆ.
ಅಂತ್ಯಕ್ರಿಯೆ ವೇಳೆ ಗಂಡ, ಸಹೋಹದರು ಸಹ ಉಪಸ್ಥಿತರಿರಲಿಲ್ಲ ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶದಲ್ಲಿ 5,269 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, 78 ಜನರು ಸಾವನ್ನಪ್ಪಿದ್ದಾರೆ.
Last Updated : Jun 11, 2020, 6:12 PM IST