ಕರ್ನಾಟಕ

karnataka

ETV Bharat / bharat

ಇವ್ರೇ ನೋಡಿ ಫ್ಲೈ ಪಾಸ್ಟ್​ನ ನೇತೃತ್ವ ವಹಿಸಲಿರುವ ಮೊದಲ ಮಹಿಳಾ ಪೈಲಟ್ - ಏರ್ ಫೋರ್ಸ್ ಫ್ಲೈಟ್ ಲೆಫ್ಟಿನೆಂಟ್ ಸ್ವಾತಿ ರಾಥೋಡ್

ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯ ಫ್ಲೈ ಪಾಸ್ಟ್​ನ ನೇತೃತ್ವವನ್ನು ಅಜ್ಮೇರ್​ನ ಏರ್​ಫೋರ್ಸ್ ಫ್ಲೈಟ್ ಲೆಫ್ಟಿನೆಂಟ್ ಸ್ವಾತಿ ರಾಥೋಡ್ ವಹಿಸಲಿದ್ದಾರೆ. ಮೊದಲ ಮಹಿಳಾ ಪೈಲಟ್ ಒಬ್ಬರು ಫ್ಲೈ ಪಾಸ್ಟ್​ನ ನೇತೃತ್ವ ವಹಿಸಿದಂತಾಗಲಿದೆ.

Women Flight Lieutenant Swati Rathore to lead for the first time on Republic Day
ಇದೇ ಮೊದಲ ಬಾರಿಗೆ ಫ್ಲೈ ಪಾಸ್ಟ್​ನ ನೇತೃತ್ವ ವಹಿಸಲಿರುವ ಮಹಿಳಾ ಪೈಲಟ್

By

Published : Jan 21, 2021, 2:22 PM IST

ರಾಜಸ್ಥಾನ:ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯ ಫ್ಲೈ ಪಾಸ್ಟ್​ನ ನೇತೃತ್ವವನ್ನು ಅಜ್ಮೇರ್​ನ ಏರ್​ಫೋರ್ಸ್ ಫ್ಲೈಟ್ ಲೆಫ್ಟಿನೆಂಟ್ ಸ್ವಾತಿ ರಾಥೋಡ್ ವಹಿಸಲಿದ್ದಾರೆ.

ಗಣರಾಜ್ಯೋತ್ಸವದ ಇತಿಹಾಸದಲ್ಲೇ ಮಹಿಳಾ ಪೈಲಟ್, ಫ್ಲೈ ಪಾಸ್ಟ್‌ನ ನಾಯಕತ್ವವನ್ನು ವಹಿಸಿಕೊಳ್ಳುತ್ತಿರುವುದು ಇದೇ ಮೊದಲು. ವಾಯುಸೇನೆಯ ಫ್ಲೈಟ್ ಲೆಫ್ಟಿನೆಂಟ್ ಸ್ವಾತಿ ರಾಥೋಡ್ ಮೂಲತಃ ನಾಗೌರಿನ ಪ್ರೇಂಪುರ ಗ್ರಾಮದವರು.

ಸ್ವಾತಿ ರಾಥೋಡ್ ಅಜ್ಮೇರ್​ನ ಮಯೂರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಜೈಪುರದ ಐಸಿಜಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು. ಇತ್ತೀಚೆಗೆ ಸ್ವಾತಿಯನ್ನು ಪ್ರಸ್ತುತ ರಾಜಸ್ಥಾನದ ವಾಯುನೆಲೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸ್ವಾತಿಗೆ ಫ್ಲೈಟ್ ಪಾಸ್ಟ್‌ನ ಜವಾಬ್ದಾರಿ ನೀಡಲಾಗಿದೆ.

ಕೇರಳದಲ್ಲಿ ಪ್ರವಾಹ ಸಂದರ್ಭದಲ್ಲಿ ಸ್ವಾತಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದರು. ಸ್ವಾತಿಯ ತಂದೆ ಡಾ.ಭವಾನಿ ಸಿಂಗ್ ಅವರು ಕೃಷಿ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದಾರೆ.

ABOUT THE AUTHOR

...view details