ತೆಲಂಗಾಣ : ಸಂಗರೆಡ್ಡಿ ಜಿಲ್ಲೆಯ ನಾರಾಯಣ್ಖೇಡ್ ವಲಯದ ಅನಂತಸಾಗರದಲ್ಲಿ ಸುಮಾರು 42 ವರ್ಷ ವಯಸ್ಸಿನ ಮಹಿಳೆಯನ್ನು ಕ್ರೂರವಾಗಿ ಹತ್ಯೆಗಯ್ಯಲಾಗಿದೆ.
ರುಂಡ ಒಂದೆಡೆ.. ಮುಂಡ ಮತ್ತೊಂದೆಡೆ: ತೆಲಂಗಾಣದಲ್ಲಿ ಮಹಿಳೆಯ ದಾರುಣ ಹತ್ಯೆ - woman body found cut in to pieces in Telangana
ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ದಾರುಣವಾಗಿ ಹತ್ಯೆಗಯ್ಯಲಾಗಿದ್ದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಲ್ಲೆಡೆ ಎಸೆಯಲಾಗಿದೆ.

ತೆಲಂಗಾಣದಲ್ಲಿ ಮಹಿಳೆಯ ದಾರುಣ ಹತ್ಯೆ
ಮಹಿಳೆಯನ್ನು ಹತ್ಯೆಗೈದ ಬಳಿಕ ಆಕೆಯ ತಲೆಯನ್ನು ನಾರಾಯಣ್ಖೇಡ್ ಪಟ್ಟಣದ ಮನೆಯಲ್ಲಿ ಬಿಟ್ಟರೆ, ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ, ಅಲ್ಲಲ್ಲಿ ಎಸೆಯಲಾಗಿದೆ.
ತೆಲಂಗಾಣದಲ್ಲಿ ಮಹಿಳೆಯ ದಾರುಣ ಹತ್ಯೆ
ಅರ್ಧ ದೇಹವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮಹಿಳೆಯನ್ನು ಆಕೆಯ ಗಂಡನೇ ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.