ಕರ್ನಾಟಕ

karnataka

ETV Bharat / bharat

ನೇಣು ಹಾಕಿಕೊಳ್ಳುವ ಫೋಟೋ ಲವರ್​ಗೆ ಕಳುಹಿಸಿ, ಆತ್ಮಹತ್ಯೆಗೆ ಶರಣಾದ ಯುವತಿ! - ನೇಣು ಹಾಕಿಕೊಳ್ಳುವ ಫೋಟೋ

ಪ್ರೀತಿಯ ವಿಚಾರದಲ್ಲಿ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

Woman WhatsApps photo of suicide
Woman WhatsApps photo of suicide

By

Published : Mar 5, 2020, 8:50 AM IST

ಕೋಲ್ಕತ್ತಾ: ಆತ್ಮಹತ್ಯೆಗೆ ಶರಣಾಗುವುದಕ್ಕೂ ಕೆಲ ನಿಮಿಷಗಳ ಮುಂಚಿತವಾಗಿ ಕುತ್ತಿಗೆಗೆ ನೇಣು ಹಾಕಿಕೊಳ್ಳುವ ಪೋಟೋ ಲವರ್​ಗೆ ಕಳುಹಿಸಿ, ಯುವತಿಯೊಬ್ಬಳೂ ಸೊಸೈಡ್​ ಮಾಡಿಕೊಂಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ರಿಮಾ ದಾಸ್​​​ ಇಲ್ಲಿನ ಕೋಟರ್ರೋಗಾ ಕಾಲೋನಿಯಲ್ಲಿ ವಾಸವಾಗಿದ್ದಳು. ಆಕೆಯ ಭೇಟಿ ಮಾಡಲು ಆಗಮಿಸಿದ್ದ ಲವರ್​​ ಮನೆಯಿಂದ ಹೋದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯುವತಿ ಕುಟುಂಬಸ್ಥರು, ಮೇಲಿಂದ ಮೇಲೆ ಹಣಕ್ಕಾಗಿ ಪೀಡಿಸುತ್ತಿದ್ದ ಯುವಕ ಹಣ ನೀಡದಿದ್ದ ವೇಳೆ ಆಕೆಯ ಮೇಲೆ ಹಲ್ಲೆ ಸಹ ಮಾಡಿದ್ದ ಎಂದು ತಿಳಿಸಿದ್ದಾರೆ. ಈಗಾಗಲೇ ಆರೋಪಿಯ ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಇನ್ನು ಇವರಿಬ್ಬರ ಸಂಬಂಧಕ್ಕೆ ಈ ಹಿಂದಿನಿಂದಲೂ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ABOUT THE AUTHOR

...view details