ಹೈದರಾಬಾದ್: 1975 ರಲ್ಲಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಘಟನೆಯೊಂದು ಟ್ವಿಟರ್ನಲ್ಲಿ ಈಗ ಭಾರೀ ಸದ್ದು ಮಾಡುತ್ತಿದೆ. ಈ ದೃಶ್ಯವೀಗ ಎಲ್ಲೆಡೆ ವೈರಲ್ ಆಗಿದೆ.
ಈ ದೃಶ್ಯವನ್ನೊಮ್ಮೆ ನೋಡಿಬಿಡಿ. ಕಪ್ಪು ಬಣ್ಣದ ಸೀರೆಯುಟ್ಟ ನೀರೆಯೊಬ್ಬಳು ಏಕಾಏಕಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಗ್ರೌಂಡ್ನೊಳಗೆ ಓಡೋಡಿ ಬರುತ್ತಾಳೆ. ನೇರವಾಗಿ ಪಿಚ್ನೊಳಗೆ ಬಂದ ಆಕೆ, ಅಲ್ಲಿದ್ದ ಕ್ರಿಕೆಟರ್ಗೆ ಮುತ್ತುಕೊಟ್ಟು ಮತ್ತೆ ಅದೇ ರೀತಿ ಹಿಂದಕ್ಕೆ ಓಡಿ ಹೋಗ್ತಾಳೆ. ಸೀರೆಯುಟ್ಟರೂ, ಕ್ಯಾಶುವಲ್ ಬಟ್ಟೆಯಲ್ಲೇ ಓಡಿದಂತೆ ತುಂಬಾನೆ ಕಂಫರ್ಟ್ ಆಗಿ ಓಡುತ್ತಾಳೆ ಆಕೆ. ಅಲ್ಲಿದ್ದ ಸಿಬ್ಬಂದಿ, ಮಹಿಳೆಯನ್ನು ತಡೆಯುವ ಪ್ರಯತ್ನ ಮಾಡ್ತಾರೆ. ಆದ್ರೆ ಅವರು ಸಫಲವಾಗುವುದಿಲ್ಲ. ಈ ವೇಳೆ ಸ್ಟೇಡಿಯಂನಲ್ಲಿ ಕೂತಿದ್ದ ಪ್ರೇಕ್ಷಕರು ಕೂಡಾ ನಿಬ್ಬೆರಗಾಗಿ ಮಹಿಳೆಯನ್ನೇ ನೋಡುತ್ತಾರೆ.