ಮುಂಬೈ( ಮಹಾರಾಷ್ಟ್ರ): ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ನೆರೆಹಾವಳಿ ಉದ್ಭವವಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡು ಗಂಜಿ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಇದರ ಮಧ್ಯೆ ಎನ್ಡಿಆರ್ಎಫ್, ಭಾರತೀಯ ಸೇನೆ ಜನರ ರಕ್ಷಣೆಯಲ್ಲಿ ನಿರಂತವಾಗಿದೆ. ವಿವಿಧ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಇವತ್ತು ಮುಂದುವರೆದಿದೆ.
ನೆರೆ ಹಾವಳಿಯಿಂದ ರಕ್ಷಣೆ ಮಾಡಿದ ಯೋಧನ ಕಾಲಿಗೆ ನಮಸ್ಕಾರ ಮಾಡಿದ ಮಹಿಳೆ! - ಮಹಾರಾಷ್ಟ್ರ
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಕುಂಭದ್ರೋಣ ಮಳೆಗೆ ಮಹಾರಾಷ್ಟ್ರ, ಉತ್ತರ ಕರ್ನಾಟಕ ಸಂಪೂರ್ಣವಾಗಿ ನಲುಗಿ ಹೋಗಿದ್ದು, ಇದರ ಮಧ್ಯೆ ಭಾರತೀಯ ಯೋಧರು ನೆರೆ ಹಾವಳಿಗೆ ಸಿಲುಕಿದವರ ರಕ್ಷಣೆ ಮಾಡುತ್ತಿದೆ. ಈ ವೇಳೆ ರಕ್ಷಣೆ ಮಾಡಿದ ಯೋಧನ ಕಾಲಿಗೆ ಮಹಿಳೆಯೋರ್ವಳು ನಮಸ್ಕಾರ ಮಾಡಿದ್ದಾಳೆ.
ಇದರ ಮಧ್ಯೆ ಸಾಂಗ್ಲಿಯಲ್ಲಿ ನೆರೆ ಹಾವಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಮಹಿಳೆಯನ್ನ ಭಾರತೀಯ ಯೋಧರು ರಕ್ಷಣೆ ಮಾಡಿದ್ದು, ಭಾವುಕರಾದ ಮಹಿಳೆ ಯೋಧನ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆರೆ ಹಾವಳಿಗೆ ಸಿಲುಕಿಕೊಂಡಿದ್ದ ವೇಳೆ ರಕ್ಷಣೆ ಮಾಡಿ ಬೋಟ್ನಲ್ಲಿ ಕುಳಿರಿಸಿಕೊಂಡು ಗಂಜಿ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಯೋಧನ ಕಾಲಿಗೆ ನಮಸ್ಕಾರ ಮಾಡಿದ್ದಾರೆ. ಈ ವೇಳೆ ಇನ್ನೊಬ್ಬ ಸೇನಾಧಿಕಾರಿ ಅವರೊಂದಿಗೆ ಇದ್ದರು.
ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಾ, ಸತಾರಾ, ಪುಣೆ ಹಾಗೂ ಸೊಲ್ಲಾಪುರ್ ಪ್ರದೇಶಗಳಲ್ಲಿ ಹೆಚ್ಚಿನ ಹಾನಿಯಾಗಿದ್ದು, ಒಟ್ಟು 2.85 ಲಕ್ಷ ಜನರ ರಕ್ಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದ ಅನೇಕರು ಸಾವನ್ನಪ್ಪಿದ್ದು ಅವರ ಕುಟುಂಬಸ್ಥರಿಗೆ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ.