ಗುರ್ಗಾಂವ್(ಹರಿಯಾಣ):ಕಾರ್ ಡ್ರೈವರ್ ಒಬ್ಬ ಮಹಿಳಾ ಟೋಲ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಹರಿಯಾಣದ ಗುರ್ಗಾಂವ್ನ ಖೇರ್ಕಿ ದೌಲಾ ಟೋಲ್ ಪ್ಲಾಜಾದಲ್ಲಿ ನಡೆದಿದೆ.
ಮಹಿಳಾ ಟೋಲ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಕಾರ್ ಡ್ರೈವರ್... ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಸಿಸಿಟಿವಿ ದೃಶ್ಯ
ಟೋಲ್ ಸಂಗ್ರಹ ವೇಳೆ ಮಹಿಳಾ ಸಿಬ್ಬಂದಿ ಹಾಗೂ ಡ್ರೈವರ್ ನಡುವೆ ಮಾತಿಗೆ ಮಾತು ಬೆಳೆದು, ಕಾರ್ ಡ್ರೈವರ್ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಹರಿಯಾಣದ ಗುರ್ಗಾಂವ್ನಲ್ಲಿ ನಡೆದಿದೆ. ಈ ದೃಶ್ಯ ಟೋಲ್ ಘಟಕದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಿಳಾ ಟೋಲ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಕಾರ್ ಡ್ರೈವರ್
ಟೋಲ್ ಸಂಗ್ರಹ ವೇಳೆ ಮಹಿಳಾ ಸಿಬ್ಬಂದಿ ಹಾಗೂ ಡ್ರೈವರ್ ನಡುವೆ ಮಾತಿಗೆ ಮಾತು ಬೆಳೆದು, ಮೊದಲು ಕಾರ್ ಡ್ರೈವರ್ ಮಹಿಳಾ ಸಿಬ್ಬಂದಿಯ ಕೆನ್ನೆ ಮೇಲೆ ಹೊಡೆದಿದ್ದಾನೆ. ಬಳಿಕ ರೊಚ್ಚಿಗೆದ್ದ ಮಹಿಳಾ ಸಿಬ್ಬಂದಿಯೂ ಆತನಿಗೆ ತಿರುಗಿಸಿ ಹೊಡೆದಿದ್ದಾರೆ.
ಈ ವೇಳೆ ಅಲ್ಲಿದ್ದ ಇತರ ಸಿಬ್ಬಂದಿ ತಡೆದರಾದರೂ ಹೊಡೆದಾಟ ನಿಲ್ಲಲಿಲ್ಲ. ಈ ವೇಳೆ ತಾಳ್ಮೆ ಕಳೆದುಕೊಂಡ ಸಿಬ್ಬಂದಿ ಟೋಲ್ ಘಟಕದಿಂದ ಹೊರ ಹೋಗಿ ಆತನಿಗೆ ಹೊಡೆದಿದ್ದಾರೆ. ಬಳಿಕ ಹೊರಗಿದ್ದವರು ಕಾರ್ ಡ್ರೈವರ್ನನ್ನು ತಡೆದಿದ್ದಾರೆ. ಇನ್ನು ಈ ದೃಶ್ಯ ಟೋಲ್ ಘಟಕದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.