ಕರ್ನಾಟಕ

karnataka

ETV Bharat / bharat

ಮದುವೆ ಪ್ರಪೋಸಲ್​​​ ನಿರಾಕರಿಸಿದ ಬಾಯ್​ಫ್ರೆಂಡ್​​... ಯುವತಿಯಿಂದ ಆ್ಯಸಿಡ್​ ದಾಳಿ!

ತನ್ನೊಂದಿಗೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಎಂದು ಯುವಕನ ಮೇಲೆ ಆತನ ಲವರ್​ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಆ್ಯಸಿಡ್​ ದಾಳಿಗೆ ಒಳಗಾದ ಯುವಕ

By

Published : Oct 26, 2019, 1:23 PM IST

ನವದೆಹಲಿ:ಮದುವೆ ಪ್ರಪೋಸಲ್​ ನಿರಾಕರಿಸಿದ ಬಾಯ್​ಫ್ರೆಂಡ್​ ಮೇಲೆ ಯುವತಿ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಅಲಿಘಡ್​​​ನ ಜೀವಂಗರ್​ ಎಂಬಲ್ಲಿ ನಡೆದಿದೆ.

19 ವರ್ಷದ ಯುವತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಆ್ಯಸಿಡ್​ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕ ಜವಾಹರ್​​ಲಾಲ್​ ನೆಹರು ಮೆಡಿಕಲ್​ ಕಾಲೇಜ್​​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಯುವಕನ ಕಣ್ಣುಗಳು ಸಂಪೂರ್ಣವಾಗಿ ಹಾಳಾಗುವ ಸಾಧ್ಯತೆ ಇದೆಯಂತೆ.

ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ನಡುವೆ ಮನಸ್ತಾಪ ಉಂಟಾಗಿದ್ದ ಕಾರಣ ಕಳೆದ ತಿಂಗಳು ಇಬ್ಬರು ಜಗಳವಾಡಿದ್ದರು. ಇದಾದ ಬಳಿಕ ಮೇಲಿಂದ ಮೇಲೆ ಯುವತಿ ಫೋನ್​ ಮಾಡಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಳಂತೆ. ಆದರೆ ಇದನ್ನು ನಿರಾಕರಿಸಿದ್ದ ಯುವಕ ಆಕೆಯಿಂದ ಆದಷ್ಟು ದೂರ ಉಳಿದಿಕೊಳ್ಳಲು ನಿರ್ಧರಿಸಿದ್ದ ಎಂದು ತಿಳಿದು ಬಂದಿದೆ.

ಪ್ರತಿದಿನ ಫೋನ್​ ಮಾಡುತ್ತಿದ್ದ ಯುವತಿ ಆತನೊಂದಿಗೆ ಇದೇ ವಿಚಾರಕ್ಕೆ ಪೀಡಿಸುತ್ತಿದ್ದಳಂತೆ. ನಿನ್ನೆ ಕೂಡ ಫೋನ್​​ ಮಾಡಿದ್ದಾಳೆ. ಆದರೆ ಕಾಲ್​ ರಿಸೀವ್​ ಮಾಡದ ಕಾರಣಕ್ಕಾಗಿ ಆತನ ಮನೆ ಹತ್ತಿರ ಬಂದಿರುವ ಯುವತಿ, ಶಾಪ್​ ಹತ್ತಿರ ನಿಂತಿದ್ದ ಯುವಕನ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮನೆಯವರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ಮಾತನಾಡಿರುವ ಆರೋಪಿ ಯುವತಿ, ಮೇಲಿಂದ ಮೇಲೆ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡುತ್ತಿದ್ದ. ನಾನು ಪ್ರಸ್ತಾಪ ತಿರಸ್ಕರಿಸಿದರೆ ಖಾಸಗಿ ಫೋಟೋ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಈ ಕೃತ್ಯವೆಸಗಿದ್ದಾಗಿ ಆರೋಪಿಸಿದ್ದಾಳೆ.

ABOUT THE AUTHOR

...view details