ಉನ್ನಾವೊ:ಸೋದರ ಸಂಬಂಧಿಯೋರ್ವ ಸ್ನೇಹಿತನೊಂದಿಗೆ ಸೇರಿಕೊಂಡು ಚಲಿಸುತ್ತಿದ್ದ ವಾಹನದಲ್ಲೇ ತನ್ನ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಮಹಿಳೆಯು ಲಖನೌ ನಗರದ ನಿವಾಸಿಯಾಗಿದ್ದು, ಲಖನೌ ಜಿಲ್ಲೆಯ ರಹೀಮಾಬಾದ್ ಪಟ್ಟಣದ ಆರೋಪಿ ಸೋದರ ಸಂಬಂಧಿ ಅವಳ ಮನೆಗೆ ಬಂದಿದ್ದ. ತಾನೊಂದು ಜಮೀನು ಖರೀದಿಸಿದ್ದೇನೆ, ಆದರೆ ತನಗೆ ಓದಲು ಬರುವುದಿಲ್ಲ. ಹೀಗಾಗಿ ಜಮೀನು ಪತ್ರ ಪಡೆಯುವ ಸಂದರ್ಭದಲ್ಲಿ ನೀನು ತಮ್ಮ ಜೊತೆಗೆ ಇರುವಂತೆ ಚಿಕ್ಕಮ್ಮನಿಗೆ ಹೇಳಿ ಆಕೆಯನ್ನು ಪಿಕಪ್ ವಾಹನದಲ್ಲಿ ಸ್ನೇಹಿತನೊಂದಿಗೆ ಕರೆದುಕೊಂಡು ಹೋಗಿದ್ದಾನೆ.
ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ ಬಳಿಕ ಲಖನೌ-ಆಗ್ರಾ ಎಕ್ಸ್‌ಪ್ರೆಸ್‌ವೇ ಬಳಿ ತಲುಪುತ್ತಿದ್ದಂತೆ ಇಬ್ಬರೂ ಮಹಿಳೆ ಮೇಲೆ ಹಲ್ಲೆ ಹಾಗೂ ಕಿರುಕುಳ ನೀಡಲು ಆರಂಭಿಸಿದ್ದಾರೆ. ಮಹಿಳೆ ಕೂಗಿಕೊಂಡಿದ್ದು, ಬೆಹಾಟಾ ಪೊಲೀಸ್ ಠಾಣೆ ಪ್ರದೇಶದ ಶಾದಿಪುರ ಗ್ರಾಮದ ಬಳಿ ಬಂದಾಗ ಕಾರನ್ನು ನಿಲ್ಲಿಸಿ ಅವಳನ್ನು ಕೊಲ್ಲಲು ಯತ್ನಿಸಿದ್ದಾರೆ. ಅಲ್ಲದೆ ಆಕೆಯ ಮುಖ, ಬಾಯಿಗೆ ಕಚ್ಚಿ ಗಾಯಗೊಳಿಸಿದ್ದು, ಇದೇ ಸಂದರ್ಭದಲ್ಲಿ ಗ್ರಾಮಸ್ಥರನ್ನು ಕಂಡ ದುಷ್ಟರು ಮಹಿಳೆಯನ್ನು ಕಾರಿನಿಂದ ಹೊರಗೆಸೆದು ಸ್ಥಳದಿಂದ ಪರಾರಿಯಾಗಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಮಹಿಳೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಬಳಿಕ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.