ಕರ್ನಾಟಕ

karnataka

ETV Bharat / bharat

ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಹಿಳಾ ಟೆಕ್ಕಿಯ ಶವ ಪತ್ತೆ - Woman Techie Found Dead frightened to jobloss

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮಹಿಳಾ ಟೆಕ್ಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಮಹಿಳಾ ಟೆಕ್ಕಿಯ ಶವ ಪತ್ತೆ

By

Published : Nov 21, 2019, 3:39 PM IST

ಹೈದರಾಬಾದ್​:ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಹಿಳಾ ಟಿಕ್ಕಿಯೊಬ್ಬಳ ಶವ ನಗರದ ರಾಯದುರ್ಗ ಪ್ರದೇಶದ ಹಾಸ್ಟೆಲ್​ನಲ್ಲಿ ಪತ್ತೆಯಾಗಿದೆ.

ನಗರದ ಸಾಫ್ಟ್​ವೇರ್ ಕಂಪನಿಯೊಂದರಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹರಿಣಿ(24) ರಾಯದುರ್ಗದ ಹಾಸ್ಟೆಲ್​ ಒಂದರಲ್ಲಿ ವಾಸವಿದ್ದರು. ಪೊಲೀಸರು ತಿಳಿಸಿದ ಮಾಹಿತಿ ಪ್ರಕಾರ ಈಕೆ ಕಂಪನಿಯಲ್ಲಿ ಈ ಮೊದಲು ನಿಭಾಯಿಸುತ್ತಿದ್ದ ಕಾಂಟ್ರಾಕ್ಟ್​ ಮುಗಿಯುತ್ತಾ ಬಂದಿದೆಯಂತೆ. ಹೀಗಾಗಿ ಹೊಸ ಕಾಂಟ್ರಾಕ್ಟ್​ ಸಿಗುತ್ತೋ ಇಲ್ಲವೋ ಎಂಬ ಭೀತಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹರಿಣಿ ಐಡಿ ಕಾರ್ಡ್​

ಈ ಬಗ್ಗೆ ರಾಯದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಪೋಸ್ಟ್​ ಮಾರ್ಟಮ್​ಗೆ ಕಳಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ರಾಯದುರ್ಗ ಠಾಣೆಯ ವೃತ್ತ ನಿರೀಕ್ಷಕರು ತಿಳಿಸಿದರು.

For All Latest Updates

TAGGED:

ABOUT THE AUTHOR

...view details