ಕರ್ನಾಟಕ

karnataka

ETV Bharat / bharat

ಕೌಟುಂಬಿಕ ವಿವಾದ: ಪತ್ನಿ ಕೊಲೆ ಮಾಡಿದ ಗಂಡ - ಕೇರಳದ ತ್ರಿಶೂರ್​ದಲ್ಲಿ ಘಟನೆ

ಹೆಂಡ್ತಿ ಕೊಲೆ ಮಾಡಿ ಸ್ನೇಹಿತನ ಮನೆಗೆ ತೆರಳಿದ್ದ ಪಾಪಿ ಗಂಡನ ಬಂಧನ ಮಾಡುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.

Woman strangled to death
Woman strangled to death

By

Published : Sep 26, 2020, 5:17 PM IST

ತ್ರಿಶೂರ್​ (ಕೇರಳ):ಕೌಟುಂಬಿಕ ಕಲಹದಿಂದಾಗಿ ಗಂಡ ಕಟ್ಟಿಕೊಂಡ ಹೆಂಡತಿ ಕೊಲೆ ಮಾಡಿರುವ ಘಟನೆ ಕೇರಳದ ತ್ರಿಶೂರ್​​ದಲ್ಲಿ ನಡೆದಿದ್ದು, ಈಗಾಗಲೇ ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತ್ರಿಶೂರ್​ ಜಿಲ್ಲೆಯ ಮಾಲಾದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಬುಧವಾರ ದಂಪತಿಗಳ ನಡುವೆ ಜಗಳ ನಡೆದಿದ್ದು, ಇದಾದ ಬಳಿಕ ದುಷ್ಕೃತ್ಯವೆಸಗಿದ್ದಾಗಿ ತಿಳಿದು ಬಂದಿದೆ.

ಘಟನೆ ಬಳಿಕ ಶಂಶಾದ್​​ ಎರಡು ಮಕ್ಕಳನ್ನ ತನ್ನ ತಾಯಿಯ ಮನೆಯಲ್ಲಿ ಬಿಟ್ಟು ಸ್ನೇಹಿತನ ಮನೆಗೆ ತೆರಳಿದ್ದಾನೆ. ಈ ವೇಳೆ ಶಂಶಾದ್​ನ ತಾಯಿಗೆ ಅನುಮಾನ ಬಂದು ಬಾಡಿಗೆ ಮನೆಗೆ ಹೋಗಿ ನೋಡಿದಾಗ ನಿಜಾಂಶ ಹೊರಬಿದ್ದಿದೆ. ತಕ್ಷಣವೇ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕೊಲೆ ಮಾಡಿರುವ ವ್ಯಕ್ತಿಯ ಬಂಧನ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details