ಕರ್ನಾಟಕ

karnataka

ETV Bharat / bharat

ಫೋನ್​​ನಲ್ಲಿ ಮಾತನಾಡುತ್ತಾ ಹಾವುಗಳ ಮೇಲೆ ಕುಳಿತ ಯುವತಿ, ಸ್ಥಳದಲ್ಲೇ ಸಾವು! - ಹಾವುಗಳ ಮೇಲೆ ಕುಳಿತ ಯುವತಿ

ಫೋನ್​ನಲ್ಲಿ ಮಾತನಾಡುತ್ತಾ ಬೆಡ್​ ರೂಮ್​ನಲ್ಲಿ ಬೆಡ್​ ಮೇಲೆ ಕುಳಿತುಕೊಳ್ಳಲು ಮುಂದಾದ ಯುವತಿಗೆ ಹಾವು ಕಚ್ಚಿದೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಗೋರಖ್​ಪುರ್​​ನಲ್ಲಿ ನಡೆದಿದೆ.

ಹಾವು/snake

By

Published : Sep 12, 2019, 5:34 PM IST

ಗೋರಖ್​​ಪುರ್​​​:ಪೋನ್​ನಲ್ಲಿ ಮಾತನಾಡುತ್ತಾ ಬೆಡ್​​ ರೂಮ್​​ನಲ್ಲಿ ಬೆಡ್​ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಯುವತಿಯೋರ್ವಳಿಗೆ ಹಾವು ಕಚ್ಚಿದೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಗೋರಖ್​ಪುರ್​​ದಲ್ಲಿ ನಡೆದಿದೆ.

ಗೋರಖ್​ಪುರ್​​ನ ರಿಯಾನ್ವಿ ಗ್ರಾಮದಲ್ಲಿ ವಾಸವಾಗಿದ್ದ ಗೀತಾ ಗಂಡ ಜೈಸಿಂಗ್​ ಯಾದವ್​​ ಥಾಯ್ಲೆಂಡ್​​ನಲ್ಲಿ ಕೆಲಸ ಮಾಡುತ್ತಿದ್ದ. ಆತನೊಂದಿಗೆ ಮಾತನಾಡುತ್ತಿದ್ದ ವೇಳೆ ಆಕೆಗೆ ಹಾವು ಕಚ್ಚಿದ್ದು, ತಕ್ಷಣವೇ ಮೂರ್ಛೆ ಹೋದ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.

ವಾಪಸ್​ ಮನೆಗೆ ಬಂದು ಬೆಡ್​ರೂಮ್​ ಪರಿಶೀಲಿಸಿದಾಗ ಎರಡು ಹಾವು ಪತ್ತೆಯಾಗಿದೆ. ಸಿಟ್ಟಿನಲ್ಲೇ ಅವುಗಳನ್ನ ಹೊಡೆದು ಸಾಯಿಸಲಾಗಿದೆ. ಎರಡು ಹಾವುಗಳು ಮನೆಯೊಳಗೆ ಹೋಗಿದ್ದ ವಿಷಯ ಈಕೆಗೆ ಗೊತ್ತಾಗದೇ ಏಕಾಏಕಿ ಅವುಗಳ ಮೇಲೆ ಕುಳಿತುಕೊಂಡಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details