ವಿಜಯವಾಡ(ಆಂಧ್ರಪ್ರದೇಶ): ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ ಮುಖಂಡರಿಂದ ತನಗೆ ಮೋಸವಾಗಿದೆ ಎಂದು ಹಿಂದುಳಿದ ವರ್ಗದ ಮಹಿಳಾ ಮುಖಂಡೆ ಸುದ್ದಿಗೋಷ್ಠಿಯಲ್ಲೇ ವಿಷ ಸೇವನೆ ಮಾಡಿರುವ ಘಟನೆ ನಡೆದಿದೆ.
ವೈಎಸ್ಆರ್ ಕಾಂಗ್ರೆಸ್ ಮುಖಂಡರಿಂದ ಮೋಸವೆಂದು ಸುದ್ದಿಗೋಷ್ಠಿಯಲ್ಲೇ ವಿಷ ಸೇವಿಸಿದ ಮಹಿಳೆ! - ವಿಷ ಸೇವಿಸಿದ ಮಹಿಳೆ
ತನಗೆ ಮೋಸವಾಗಿದೆ ಎಂದು ಆರೋಪಿಸಿ ಮಹಿಳೆಯೋರ್ವಳು ವಿಷ ಸೇವನೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ವಿಜಯವಾಡದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಮಾಲಾ ಮಹಾನಾಡು ವರ್ಗದ ಮಹಿಳಾ ಮುಖಂಡೆ ಬೊಲ್ಲಿಪಲ್ಲಿ ಜೋನಿ ಕುಮಾರಿ ಈ ನಿರ್ಧಾರ ಕೈಗೊಂಡಿದ್ದಾರೆ. ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ವೈಎಸ್ಆರ್ಸಿಪಿ ಮುಖಂಡರು ತನಗೆ ಮೋಸ ಮಾಡಿದ್ದಾರೆಂದು ಹೇಳಿಕೊಂಡಿದ್ದು, ಸಂಸದ ವಿಜಯಸಾಯಿ ರೆಡ್ಡಿ ಭೇಟಿಯಾಗಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡುವಂತೆ ಕೇಳಿಕೊಂಡಿದೆ. ಆದರೆ ಅವರು ನನಗೆ ಅವಕಾಶ ನೀಡಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.
ವಿಷ ಸೇವನೆ ಮಾಡುತ್ತಿದ್ದಂತೆ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.