ಕರ್ನಾಟಕ

karnataka

ETV Bharat / bharat

ಪೊಲೀಸ್ ಪ್ರಧಾನ ಕಚೇರಿಯ 500 ಮೀ ದೂರದಲ್ಲೇ ಮಹಿಳೆ ಮೇಲೆ ಅತ್ಯಾಚಾರ! - ಮಹಿಳೆ ಮೇಲೆ ಕಾಮುಕನಿಂದ ರೇಪ್​

ಕಾಮುಕನೋರ್ವ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ನಡೆಸಿ ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Woman raped in shop near Bhopal
Woman raped in shop near Bhopal

By

Published : Jan 15, 2021, 7:01 PM IST

ಭೋಪಾಲ್​(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಮಹಿಳೆಯ ಮೇಲೆ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಕಾಮುಕನೋರ್ವ 35 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ.

ಭೋಪಾಲ್​ ಪೊಲೀಸ್ ಹೆಡ್​ಕ್ವಾರ್ಟಸ್‌ನಿಂದ ಕೇವಲ 500 ಮೀಟರ್​ ದೂರದಲ್ಲೇ ಈ ದುಷ್ಕೃತ್ಯ ನಡೆದಿದೆ. ಆಸ್ಪತ್ರೆಯಿಂದ ತಡರಾತ್ರಿ ವಾಪಸ್​ ಬರುತ್ತಿದ್ದ ಮಹಿಳೆಯನ್ನು ಆರೋಪಿ ತನ್ನ ಅಂಗಡಿಯೊಳಗೆ ಎಳೆದೊಯ್ದು ಕೃತ್ಯ ಎಸಗಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸಂಕ್ರಾಂತಿ ಪವಿತ್ರ ಸ್ನಾನಕ್ಕೆ ತೆರಳಿದ ಯುವತಿ ಮೇಲೆ ಗ್ಯಾಂಗ್​ರೇಪ್​! ಆರೋಪಿಗಳಲ್ಲೊಬ್ಬ ಅಪ್ರಾಪ್ತ!

ಕಾಮುಕನಿಂದ ತಪ್ಪಿಸಿಕೊಂಡು ಬಳಿಕ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕಾಗಮಿಸಿದ ಅವರು ಆರೋಪಿಯ ಬಂಧನ ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ ಮಧ್ಯಪ್ರದೇಶದಲ್ಲೇ ಕಾಮುಕರ ಗುಂಪೊಂದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಗುಪ್ತಾಂಗದೊಳಗೆ ರಾಡ್​ ಹಾಕಿದ್ದ ಅಮಾನವೀಯ ಘಟನೆ ನಡೆದಿತ್ತು.

ABOUT THE AUTHOR

...view details