ಇಡುಕ್ಕಿ(ತಮಿಳುನಾಡು) :ಹಿಂಬಾಲಿಸಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಮಹಿಳೆಯೇ ಹತ್ಯೆಗೈದಿರುವ ಘಟನೆ ತಮಿಳುನಾಡು ಬೋಡಿನಾಯಕನೂರಿನ ಸಂತನಪರಾ ಬಾಲ್ ರಾಮ್ನಲ್ಲಿ ನಡೆದಿದೆ.
ರಾಜನ್ ಎಂಬ ವ್ಯಕ್ತಿ 38 ವರ್ಷದ ವಲರ್ಮತಿ ಎಂಬಾಕೆಯ ಹಿಂದೆ ಬಿದ್ದು ಕಾಡುತ್ತಿದ್ದನಂತೆ. ಇದರಿಂದ ಬೇಸತ್ತ ಮಹಿಳೆ ಆತನ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಕೊಲೆಯಾದ ರಾಜನ್ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ವಿಚ್ಛೇದನ ನೀಡಿದ್ದಾನೆ. ಅಲ್ಲದೆ, ವಲರ್ಮತಿಗೆ ಕರೆ ಮಾಡಿ, ಮನೆಗೆ ಹೋಗಿ ತೊಂದರೆ ನೀಡ್ತಿದ್ದನಂತೆ. ಇದನ್ನೆಲ್ಲ ಕಂಡ ಸ್ಥಳೀಯರು ರಾಜನ್ಗೆ ಎಚ್ಚರಿಕೆ ನೀಡಿದ್ರಂತೆ. ಆದ್ರೂ ಆತ ತನ್ನ ಚಾಳಿ ಮುಂದುವರಿಸಿದ್ದನು.