ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ಬಸ್​​ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ! - ಚಲಿಸುತ್ತಿದ್ದ ಬಸ್​​ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ

ಕಾಮುಕ ವ್ಯಕ್ತಿಯೋರ್ವ ಚಲಿಸುತ್ತಿದ್ದ ಬಸ್​​ನಲ್ಲೇ ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

Woman 'molested' inside moving bus in city
ಚಲಿಸುತ್ತಿದ್ದ ಬಸ್​​ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ

By

Published : Jan 4, 2020, 5:12 PM IST

ಕೋಲ್ಕತ್ತಾ: ಚಲಿಸುತ್ತಿದ್ದ ಬಸ್​​ನಲ್ಲೇ ಮಹಿಳೆಯೋರ್ವಳಿಗೆ ಕಾಮುಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೋಲ್ಕತ್ತಾದ ಹೃದಯ ಭಾಗ ಎಸ್ಪ್ಲೇನೇಡ್ ಪ್ರದೇಶದಲ್ಲಿ ನಡೆದಿದೆ.

ಮುಂಜಾನೆ 10 ಗಂಟೆ ಸುಮಾರು ಮನೆಯಿಂದ ಆಫೀಸ್​ಗೆ ಹೋಗುತ್ತಿದ್ದಾಗ ಬಸ್​​ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೂರಿನಲ್ಲಿ ಮಹಿಳೆ ತಿಳಿಸಿರುವ ಪ್ರಕಾರ, 20ರ ಯುವಕನೋರ್ವ ಬಸ್​​ನಲ್ಲಿ ಈ ರೀತಿಯಾಗಿ ವರ್ತನೆ ಮಾಡಿದ್ದು, ಬಸ್​ ಸಂಪೂರ್ಣವಾಗಿ ತುಂಬಿಕೊಂಡಿದ್ದರಿಂದ ಪಾರ್ಕ್​ ಸ್ಟ್ರೀಟ್​ ಹಾಗೂ ಜವಾಹರ್​ಲಾಲ್​ ನೆಹರು ರೋಡ್​​ ಮಧ್ಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಮಹಿಳೆ ಬಸ್​​ನಿಂದ ಇಳಿಯುತ್ತಿದ್ದಂತೆ ಟ್ರಾಫಿಕ್​ ಪೊಲೀಸರ ಕೈಗೆ ಒಪ್ಪಿಸಿದ್ದು, ಈ ವೇಳೆ ಲೋಕಲ್​ ಪೊಲೀಸರು ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಾಮುಕ ವ್ಯಕ್ತಿಯನ್ನ ಕಂಬಿ ಹಿಂದೆ ತಳ್ಳಿದ್ದಾಗಿ ತಿಳಿದು ಬಂದಿದೆ.

For All Latest Updates

ABOUT THE AUTHOR

...view details