ಕರ್ನಾಟಕ

karnataka

ETV Bharat / bharat

ಗಂಡನನ್ನೇ ತುಂಡು ತುಂಡಾಗಿ ಕತ್ತರಿಸಿ ಒಗೆದ ಹೆಂಡತಿ, ಮಗ

ಗಂಡನ ಪಿಂಚಣಿ ಹಣದಲ್ಲಿ ಪಾಲು ಹಾಗೂ ಸಹಾನುಭೂತಿ ಅಡಿ ಮಗನಿಗೆ ಸರ್ಕಾರಿ ಕೆಲಸ ದಕ್ಕಿಸಿಕೊಳ್ಳುವ ದುರಾಸೆಯಿಂದ ಮಹಿಳೆಯೊಬ್ಬಳು ತನ್ನ ಮಗನ ಸಹಾಯದಿಂದ ತನ್ನ ಗಂಡನನ್ನೇ ಇರಿದು ತುಂಡು ತುಂಡಾಗಿ ಕತ್ತರಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗಂಡನನ್ನೆ ತುಂಡು ತುಂಡಾಗಿ ಕತ್ತರಿಸಿ ಒಗೆದ ಹೆಂಡತಿ, ಮಗ

By

Published : Sep 18, 2019, 3:10 PM IST

ಬುಲಂದ್‌ಶಹರ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮಗನ ಸಹಾಯದಿಂದ ತನ್ನ ಗಂಡನ್ನೇ ಇರಿದು ತುಂಡು ತುಂಡಾಗಿ ಕತ್ತರಿಸಿ ಕೊಂದಿರುವ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಗಂಡನ ಪಿಂಚಣಿ ಹಣದಲ್ಲಿ ಪಾಲು ಹಾಗೂ ಸಹಾನುಭೂತಿಯ ಅಡಿ ಮಗನಿಗೆ ಸರ್ಕಾರಿ ಕೆಲಸ ದಕ್ಕಿಸಿಕೊಳ್ಳುವ ದುರಾಸೆಯಿಂದ ಈ ಇವರಿಬ್ಬರು ಈ ಕೃತ್ಯ ಎಸಗಿದ್ದಾರೆ.

ಸ್ಥಳೀಯ ಶಾಲೆಯಲ್ಲಿ 4ನೇ ದರ್ಜೆ ಉದ್ಯೋಗಿಯಾಗಿದ್ದ ತೇಜ್ರಾಮ್ (59) ಕೊಲೆಯಾದ ವ್ಯಕ್ತಿ. ಈತ ಊಟ ಮಾಡುತ್ತಿದ್ದಾಗ ಪತ್ನಿ ಮೆಮ್ವತಿ (55) ಮತ್ತು ಮಗ ಕಪಿಲ್ (30) ಕೊಡಲಿಯಿಂದ ಕೊಚ್ಚಿ ಕೊಂದಿದ್ದಾರೆ. ನಂತರ, ಅವರಿಬ್ಬರೂ ಕತ್ತರಿಸಿದ ದೇಹದ ತುಂಡುಗಳನ್ನು ಬುಟ್ಟಿಯಲ್ಲಿ ಹಾಕಿ ಕಸದಿಂದ ಮುಚ್ಚಿದ್ದಾರೆ.

ಏತನ್ಮಧ್ಯೆ, ಬುಲಂದ್‌ಶಹರ್‌ನ ಸಯಾನಾ ಗ್ರಾಮದ ಬಳಿಯ ಕಾಡಿನೊಳಗಿದ್ದ ಕಸದ ರಾಶಿಯಲ್ಲಿ ಮೃತ ವ್ಯಕ್ತಿಯ ದೇಹದ ತುಣುಕುಗಳನ್ನು ಒಳಗೊಂಡಿರುವ ಚೀಲವೊಂದನ್ನು ಪೊಲೀಸರು ಮಂಗಳವಾರ ಪತ್ತೆ ಮಾಡಿದ್ದಾರೆ.

ಇಬ್ಬರೂ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details