ಶ್ರಿನಗರ (ಜಮ್ಮು ಮತ್ತು ಕಾಶ್ಮೀರ):ಇಲ್ಲಿನ ಬಾಟಾಮಾಲೋ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದ್ದು, ಈ ವೇಳೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಪೈಕಿ ಒಬ್ಬರು ಮಹಿಳೆಯೂ ಸಹ ಗುಂಡೇಟಿಗೆ ಬಲಿಯಾಗಿದ್ದಾರೆ.
ಘಟನೆಯಲ್ಲಿ ಓರ್ವ ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಶ್ರೀನಗರದ ಭಾಗದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಈ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಎನ್ಕೌಂಟರ್ನಲ್ಲಿ ಮೂವರು ಉಗ್ರರು ಸಾವನೊಪ್ಪಿದ್ದಾರೆ.
ಶ್ರೀನಗರ: ಎನ್ಕೌಂಟರ್ಗೆ ಮೂವರು ಉಗ್ರರು ಬಲಿ...ಓರ್ವ ಭದ್ರತಾ ಸಿಬ್ಬಂದಿಗೆ ಗಾಯ ಉಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆ ಸಿಬ್ಬಂದಿ ಬಳಿಕ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳವನ್ನು ಉಗ್ರರಿಂದ ಮುಕ್ತಗೊಳಿಸಿದ್ದಾರೆ. ಇನ್ನೂ ಈ ಕುರಿತು ಸಿಆರ್ಪಿಎಫ್ ಐಜಿ ಚಾರು ಸಿನ್ಹಾ ಮಾತನಾಡಿ, ಉಗ್ರರು ಅಡಗಿದ್ದ ಸ್ಥಳವನ್ನು ಈಗಾಗಲೇ ಕ್ಲಿಯರ್ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ಇನ್ನೂ ಪ್ರಸಕ್ತ ವರ್ಷ ಕಾಶ್ಮೀರದಲ್ಲಿ ಈವರೆಗೆ 177 ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇದರಲ್ಲಿ 12 ಉಗ್ರರು ಜಮ್ಮು ಪ್ರದೇಶದಲ್ಲಿ ಹತರಾಗಿದ್ದಾರೆ. ಈ ನಡುವೆ ಉಗ್ರ ಸಂಘಟನೆ ಸೇರಿದ್ದ 20 ಮಂದಿಯನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗಿದೆ ಎಂದು ಶ್ರೀನಗರ ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದಲ್ಲದೆ ಫೈರಿಂಗ್ ವೇಳೆ ನಾಗರಿಕರು ಸಾವನಪ್ಪುವುದನ್ನು ಸಹಿಸಲಾಗದು. ಇನ್ನೂ ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.