ಪಲಾಮು (ಜಾರ್ಖಂಡ್): ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಗ್ರಾಮಸ್ಥರು ಮಹಿಳೆ ಮತ್ತು ಆಕೆಯ ಒಂದು ಮಗುವನ್ನು ಕಾಪಾಡಿದ್ದಾರೆ.
ಪತಿಯೊಂದಿಗೆ ಮನಸ್ತಾಪ: ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿದ ಮಹಿಳೆ - ಮಹಿಳೆ ಆತ್ಮಹತ್ಯೆ ಯತ್ನ
ಗೋರಡಿಹ್ ಗ್ರಾಮದ ಸಂಗೀತಾ ದೇವಿ ಮತ್ತು ಪತಿ ರಾಮ್‌ಸೇವಕ್ ಮಹತೋ ನಡುವೆ ಶನಿವಾರ ಮನಸ್ತಾಪವಾಗಿತ್ತು. ಭಾನುವಾರ ಮಧ್ಯಾಹ್ನ, ಮಹಿಳೆ ಮನೆಯಿಂದ 500 ಮೀಟರ್ ದೂರದಲ್ಲಿರುವ ಕೆರೆಗೆ ತನ್ನ ಮೂವರು ಮಕ್ಕಳೊಂದಿಗೆ ಹಾರಿದ್ದಾಳೆ.
ಪಲಾಮುವಿನ ಲೆಸ್ಲಿಗಂಜ್ ಪೊಲೀಸ್ ಠಾಣೆ ಪ್ರದೇಶದ ಗೋರಡಿಹ್ ಗ್ರಾಮದಲ್ಲಿ ಘಟನೆ ಜರುಗಿದೆ. ಮಹಿಳೆ ಮತ್ತು ಆಕೆಯ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಾಹಿತಿಯ ಪ್ರಕಾರ, ಗೋರಡಿಹ್ ಗ್ರಾಮದ ಸಂಗೀತಾ ದೇವಿ ಮತ್ತು ಪತಿ ರಾಮ್‌ಸೇವಕ್ ಮಹತೋ ನಡುವೆ ಶನಿವಾರ ಮನಸ್ತಾಪವಾಗಿತ್ತು. ಭಾನುವಾರ ಮಧ್ಯಾಹ್ನ, ಮಹಿಳೆ ಮನೆಯಿಂದ 500 ಮೀಟರ್ ದೂರದಲ್ಲಿರುವ ಕೆರೆಗೆ ತನ್ನ ಮೂವರು ಮಕ್ಕಳೊಂದಿಗೆ ಹಾರಿದ್ದಾಳೆ. ಗ್ರಾಮಸ್ಥರು ತಕ್ಷಣ ನಾಲ್ವರನ್ನು ಮೇಲೆತ್ತಲು ಯತ್ನಿಸಿದ್ದಾರೆ. ಆದರೆ ಸಂಗೀತಾ ದೇವಿ ಮತ್ತು ಅವಳ 8 ವರ್ಷದ ಮಗು ಮಾತ್ರ ಬದುಕುಳಿದಿದ್ದು, 5 ವರ್ಷದ ಮತ್ತು 8 ತಿಂಗಳ ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿವೆ.