ಕರ್ನಾಟಕ

karnataka

50 ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತು ಹೊಂದಿದ್ದ ಮಹಿಳೆ ಬಂಧನ!

By

Published : Nov 30, 2020, 6:11 PM IST

ನಿಷೇಧಿತ ಮಾದಕ ವಸ್ತು ಹೊಂದಿದ್ದ ಯುವತಿಯೊಬ್ಬಳನ್ನು ಬಂಧಿಸಿದ ಮಹಾರಾಷ್ಟ್ರದ ಪೊಲೀಸರು ಆಕೆಯಿಂದ 503 ಗ್ರಾಂ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದಕ್ಕೆ 50.30 ಲಕ್ಷ ರೂ. ಮೌಲ್ಯ ಎನ್ನಲಾಗುತ್ತಿದೆ.

Woman held with mephedrone worth over Rs 50 lakh in Mumbai
ಸಂಗ್ರಹ ಚಿತ್ರ

ಮುಂಬೈ:50 ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತು (ಮೆಫೆಡ್ರೋನ್) ವಶಪಡಿಸಿಕೊಂಡ ಮಹಾರಾಷ್ಟ್ರದ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮಾದಕ ವಸ್ತು ಜೊತೆಗೆ 26 ವರ್ಷದ ಯುವತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೋಮವಾರ ಹಿರಿಯ ಪೊಲೀಸ್​ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.

ಭಾನುವಾರ ಮಧ್ಯಾಹ್ನ ಉಪನಗರ ಕುರ್ಲಾದ ಎಲ್​ಬಿಎಸ್​ ಮಾರ್ಗದಲ್ಲಿ ತೆರಳುತ್ತಿದ್ದಾಗ ಮಾದಕ ವಸ್ತು ವಿರೋಧಿ ಕೋಶದ ಅಧಿಕಾರಿಗಳು ನೀಡಿದ ಖಚಿತ ಮಾಹಿತಿ ಹಿನ್ನೆಲೆ ಮಹಿಳಾ ಡ್ರಗ್ ಪೆಡ್ಲರ್​​ ಅನ್ನು ಬಂಧಿಸಲಾಗಿದ್ದು ಆಕೆಯಿಂದ 503 ಗ್ರಾಂ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದಕ್ಕೆ 50.30 ಲಕ್ಷ ರೂ. ಮೌಲ್ಯ ಎನ್ನಲಾಗುತ್ತಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆ ಅಡಿ ಮಹಿಳೆಯನ್ನು ಬಂಧಿಸಿ ಈ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಮಾದಕ ವಸ್ತು ಸಾಗಿಸುತ್ತಿದ್ದ ಪಾಕ್ ಹಾಗೂ ಲಂಕಾದ ಆರು ಜನರನ್ನು ಬಂಧಿಸಿದ ಐಸಿಜಿ

ಮುಂಬೈನ ಹಲವು ಪೊಲೀಸ್ ಠಾಣೆಗಳಲ್ಲಿ ಬಂಧಿತ ಮಹಿಳೆ ಮತ್ತು ಅವಳ ಪತಿ ವಿರುದ್ಧ ನಾನಾ ಪ್ರಕರಣಗಳಡಿ ನಾನಾ ದೂರುಗಳು ದಾಖಲಾಗಿವೆ ಎನ್ನಲಾಗುತ್ತಿದೆ. ಮೆಫೆಡ್ರೋನ್​ಗೆ ಅಡ್ಡ ಹೆಸರಿನಿಂದ 'ಮಿಯಾಂವ್ ಮಿಯಾಂವ್' ಅಥವಾ ಎಂಡಿ ಎಂದೂ ಹೆಸರು ಸೂಚಿಸಿ ಕರೆಯಲಾಗುತ್ತದೆ.

ABOUT THE AUTHOR

...view details