ನವದೆಹಲಿ:ಬರೋಬ್ಬರಿ 900 ಜನರಿಗೆ 250 ಕೋಟಿ ರೂ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾ ಮೂಲದ 47 ವರ್ಷದ ಮಹಿಳೆ ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ನಂಬಿಸಿ 250 ಕೋಟಿ ರೂ. ವಂಚನೆ: ಮಹಿಳೆ ಬಂಧಿಸಿದ ಪೊಲೀಸರು!
ದ್ವಿಗುಣ ಬಡ್ಡಿ ಆಸೆ ಹುಟ್ಟಿಸಿ ಬರೋಬ್ಬರಿ 250 ಕೋಟಿ ರೂ. ವಂಚನೆ ಮಾಡಿದ್ದ ಮಹಿಳೆಯೊಬ್ಬಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರು ತಿಳಿಸಿರುವ ಪ್ರಕಾರ ಮಹಿಳೆ ಮೇಲೆ 2019ರಲ್ಲಿ ದೂರು ದಾಖಲಾಗಿತ್ತು. ಹಲೋ ಟ್ಯಾಕ್ಸಿ ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ.200ರಷ್ಟು ಬಡ್ಡಿ ದರ ನೀಡುವುದಾಗಿ ಹೇಳಿದ್ದರು. ಹೀಗಾಗಿ ಬರೋಬ್ಬರಿ 900 ಜನರು 250 ಕೋಟಿ ರೂ ಹೂಡಿಕೆ ಮಾಡಿದ್ದರು. ಇದಾದ ಬಳಿಕ ಹಣ ತೆಗೆದುಕೊಂಡು ಪರಾರಿಯಾಗಿದ್ದರು.
ಇದೀಗ ಕಂಪನಿ ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲನೆ ಮಾಡಿದಾಗಿ 3,27,48,495 ರೂ ಇರುವ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದ್ದುಮ 3.5 ಕೋಟಿ ರೂ. ಮೌಲ್ಯದ 60 ಹೊಸ ಕಾರುಗಳನ್ನ ನೋಯ್ಡಾದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.