ಬದೌನ್(ಉತ್ತರಪ್ರದೇಶ): ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬಳು ಮಗನನ್ನು ಕೊಂದು ತದನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬದೌನ್ ಪ್ರದೇಶದಲ್ಲಿ ನಡೆದಿದೆ.
ವರದಕ್ಷಿಣೆ ಕಿರುಕುಳ: ಮಗನ ಕೊಂದು ಆತ್ಮಹತ್ಯೆಗೆ ಶರಣಾದ 22 ವರ್ಷದ ಮಹಿಳೆ! - ಮಹಿಳೆ ಆತ್ಮಹತ್ಯೆಗೆ ಶರಣು
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬಳು ಮಗನನ್ನು ಕೊಂದು ತದನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
![ವರದಕ್ಷಿಣೆ ಕಿರುಕುಳ: ಮಗನ ಕೊಂದು ಆತ್ಮಹತ್ಯೆಗೆ ಶರಣಾದ 22 ವರ್ಷದ ಮಹಿಳೆ! Woman death](https://etvbharatimages.akamaized.net/etvbharat/prod-images/768-512-8536691-thumbnail-3x2-wdfdfd.jpg)
ಫಾತೀಮಾ ಎಂಬ 22 ವರ್ಷದ ಮಹಿಳೆ ತನ್ನ 14 ವರ್ಷದ ಮಗನ ಕೊಲೆ ಮಾಡಿದ್ದು, ತದ ನಂತರ ತಾನು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಗಾಗಲೇ ಗಂಡನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಿಳೆಯ ತಂದೆ ದೂರು ದಾಖಲು ಮಾಡಿದ್ದು, ಇದರ ಪ್ರಕಾರ ಕಳೆದ ಕೆಲ ತಿಂಗಳಿಂದ ವರದಕ್ಷಿಣೆಗೋಸ್ಕರ ಆಕೆಯ ಮೇಲೆ ಗಂಡನ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದರು. ಕಳೆದ ಭಾನುವಾರ ಅಮಾನವೀಯ ರೀತಿಯಲ್ಲಿ ಹಲ್ಲೆ ಕೂಡ ನಡೆಸಿದ್ದರು ಎಂದಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಸಿಂಗ್ ಚೌಹಾಣ್ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.