ಉತ್ತರಾಖಂಡ್:ಅಪರೂಪದ ಪ್ರಕರಣ ಎಂಬಂತೆ ಉತ್ತರಾಖಂಡದ ರಿಷಿಕೇಶ್ನಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ 24 ವರ್ಷದ ಮಹಿಳೆಯೋರ್ವಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಉತ್ತರಾಖಂಡ್ನಲ್ಲಿ ಅಪರೂಪದ ಪ್ರಕರಣ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ - ಉತ್ತರಾಖಂಡದ ರಿಷಿಕೇಶ್ನಲ್ಲಿನ ಏಮ್ಸ್ ಆಸ್ಪತ್ರೆ
ಉತ್ತರಾಖಂಡದ ರಿಷಿಕೇಶ್ನಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ 24 ವರ್ಷದ ಮಹಿಳೆಯೋರ್ವಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ಪ್ರತಿ ಏಳು ಲಕ್ಷ ಮಗುವಿನ ಜನನಕ್ಕೆ ಒಂದು ಪ್ರಕರಣದಲ್ಲಿ ಮಾತ್ರ ನಾಲ್ಕು ಮಕ್ಕಳು ಜನಿಸುವುದರಿಂದ ಇದೊಂದು ಅಪರೂಪದ ಪ್ರಕರಣ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರತಿ ಏಳು ಲಕ್ಷ ಮಗುವಿನ ಜನನಕ್ಕೆ ಒಂದು ಪ್ರಕರಣದಲ್ಲಿ ಮಾತ್ರ ನಾಲ್ಕು ಮಕ್ಕಳು ಜನಿಸುವುದರಿಂದ ಇದೊಂದು ಅಪರೂಪದ ಪ್ರಕರಣ ಎಂದು ರಿಷಿಕೇಶ್ ಏಮ್ಸ್ನ ವೈದ್ಯರು ಹೇಳಿದ್ದಾರೆ.
ಮಹಿಳೆಯು ಉತ್ತರಕಾಶಿಯ ಬಾರ್ಕೋಟ್ ನಿವಾಸಿಯಾಗಿದ್ದು, 34 ವಾರಗಳ ಗರ್ಭಿಣಿಯಾಗಿದ್ದರು. ಮಹಿಳೆಯನ್ನು ಡೆಹರಾಡೂನ್ನ ದೂನ್ ಆಸ್ಪತ್ರೆಯಿಂದ ಇಲ್ಲಿಗೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡುವುದಾಗಿ ಹೇಳಿ ಕಳುಹಿಸಲಾಗಿತ್ತು. ಆದರೆ ಅಲ್ಟ್ರಾಸೌಂಡ್ ಸ್ಕಾನಿಂಗ್ನಲ್ಲಿ ಮಹಿಳೆಯ ಗರ್ಭದಲ್ಲಿ ನಾಲ್ಕು ಮಕ್ಕಳಿರುವುದು ತಿಳಿದು ಬಂದಿದ್ದು, ಹೆರಿಗೆ ಯಶಸ್ವಿಯಾಗಿದೆ. ಜನಿಸಿರುವ ಎರಡು ಹೆಣ್ಣು ಹಾಗೂ ಎರಡು ಗಂಡು ಮಕ್ಕಳು ಆರೋಗ್ಯಕರವಾಗಿದೆ ಎಂದು ಡಾ.ಅನುಪಮಾ ಬಹದ್ದೂರ್ ತಿಳಿಸಿದ್ದಾರೆ.