ಉತ್ತರಪ್ರದೇಶ: ಬರಾಬಂಕಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಟ್ಟಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈಕೆ ಬಲು ಗಟ್ಟಿಗಿತ್ತಿ.. ಒಂದಲ್ಲ, ಎರಡಲ್ಲ ಒಟ್ಟಿಗೆ 5 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!! - woman gave birth 5 children in barabanki
9 ತಿಂಗಳು ತುಂಬುವ ಮೊದಲೇ ಹೆರಿಗೆಯಾಗಿದ್ದರಿಂದ ಮಕ್ಕಳನ್ನು ಐಸಿಯುನಲ್ಲಿರಿಸಲಾಗಿದೆ. ಒಟ್ಟಿಗೆ ಐದು ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಅನಿತಾ ಆರೋಗ್ಯವಾಗಿದ್ದಾರೆ. ಆದರೆ, ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
9 ತಿಂಗಳು ತುಂಬುವ ಮೊದಲೇ ಹೆರಿಗೆಯಾದ್ದರಿಂದ ಮಕ್ಕಳನ್ನು ಐಸಿಯುನಲ್ಲಿ ಇಡಲಾಗಿದೆ. ಒಟ್ಟಿಗೆ ಐದು ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಅನಿತಾ ಆರೋಗ್ಯವಾಗಿದ್ದಾರೆ. ಆದರೆ, ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಯಿ ಅನಿತಾ ಸ್ಕ್ಯಾನಿಂಗ್ ವೇಳೆ ಎರಡಕ್ಕಿಂತ ಹೆಚ್ಚು ಮಕ್ಕಳು ಗರ್ಭದಲ್ಲಿರುವುದಾಗಿ ವೈದ್ಯರು ತಿಳಿಸಿದ್ರು. ಆದರೆ, 5 ಮಕ್ಕಳಿರುವುದು ಗೊತ್ತಿರಲಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಕ್ಕಳ ತಂದೆ ನಮಗೆ ಈಗಾಗಲೇ ಒಂದು ಮಗುವಿದೆ. ಇದೀಗ ಒಟ್ಟಿಗೆ 5 ಮಕ್ಕಳು ಜನಿಸಿರುವುದು ಕುಟುಂಬದವರಿಗೆ ಹರ್ಷ ತಂದಿದೆ. ಆದರೆ, ನಮ್ಮದು ಕೃಷಿ ಕುಟುಂಬವಾದ್ದರಿಂದ ಮಕ್ಕಳನ್ನು ಸಾಕುವುದು ಸವಾಲಾಗಿದೆ ಎಂದಿದ್ದಾರೆ.