ಕರ್ನಾಟಕ

karnataka

ETV Bharat / bharat

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ! ಈ ಕ್ರೌರ್ಯಕ್ಕೆ ಕೊನೆ ಎಂದು? - ರಾಜಸ್ಥಾನ ಅಪರಾಧ ಸುದ್ದಿ

ರಾಜಸ್ಥಾನದ ಥಾಣಾ ಪ್ರದೇಶದ ನಿವಾಸಿಯಾಗಿರುವ ಸಂತ್ರಸ್ತೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ದೂರು ನೀಡಿದ್ದಾಳೆ. ರಾಜ್ಯದ ಧೋಲ್ಪುರ್ ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ವರದಿಯಾದ ಎರಡನೇ ಸಾಮೂಹಿಕ ಅತ್ಯಾಚಾರ ಪ್ರಕರಣ ಇದಾಗಿದೆ.

gangrape
ಸಾಮೂಹಿಕ ಅತ್ಯಾಚಾರ

By

Published : Jul 28, 2020, 12:06 PM IST

ಧೋಲ್ಪುರ್(ರಾಜಸ್ಥಾನ): ಇಲ್ಲಿನ ಸೈಪೌ ಪ್ರದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆದಿದ್ದು, 27 ವರ್ಷದ ಯುವತಿಯೊಬ್ಬಳನ್ನು ಬೆದರಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಈ ಬಗ್ಗೆ ಸೈಪೌ ಪೊಲೀಸ್ ಠಾಣೆಯ ಪೊಲೀಸ್​ ಸಿಬ್ಬಂದಿ ಅನೂಪ್ ಚೌಧರಿ ತಿಳಿಸಿದ್ದು, ಥಾಣಾ ಪ್ರದೇಶದ ನಿವಾಸಿಯಾಗಿರುವ ಸಂತ್ರಸ್ತೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ದೂರು ನೀಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಆರೋಪಿಗಳನ್ನು ವಿಚಾರಣೆ ನಡೆಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಚೌಧರಿ ತಿಳಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚೌಧರಿ ಭರವಸೆ ನೀಡಿದ್ದಾರೆ.

ಧೋಲ್ಪುರ್ ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ವರದಿಯಾದ ಎರಡನೇ ಸಾಮೂಹಿಕ ಅತ್ಯಾಚಾರ ಪ್ರಕರಣ ಇದಾಗಿದೆ. ಈ ಹಿಂದೆ ಕಳೆದ ಭಾನುವಾರ, ಜಿಲ್ಲೆಯ ಆರು ಪುರುಷರು 24 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ದುಷ್ಕೃತ್ಯ ನಡೆದಿದೆ.

ABOUT THE AUTHOR

...view details