ಕರ್ನಾಟಕ

karnataka

ETV Bharat / bharat

ಸಹಾಯ ಮಾಡುವ ನೆಪದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ! - ಚುರು ರಾಜಸ್ಥಾನ ಲೆಟೆಸ್ಟ್ ನ್ಯೂಸ್

ಯುವತಿಯೋರ್ವಳಿಗೆ ಸಹಾಯ ಮಾಡುವ ನೆಪದಲ್ಲಿ ಜೈಪುರದ ಹೋಟೆಲ್​ಗೆ‌ ಕರೆದೊಯ್ದು 9 ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

gang rape in Churu
ಸತತ ಒಂದು ವಾರಗಳ ಕಾಲ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 9 ಕಾಮುಕರು!

By

Published : Oct 6, 2020, 10:00 AM IST

ಚುರು(ರಾಜಸ್ಥಾನ): ಚುರು ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳಿಗೆ ಮಾದಕ ಪಾನೀಯ ಕೊಟ್ಟು ನಂತರ 9 ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಸೆಪ್ಟೆಂಬರ್​ 24ರಂದು ಯುವತಿ ಎಸ್‌ಎಸ್‌ಸಿ ಪರೀಕ್ಷೆಗೆ ಅರ್ಜಿ ಭರ್ತಿ ಮಾಡುವ ಸಲುವಾಗಿ ಹೋಗಿದ್ದು, ವಿಕ್ರಮ್ ಎಂಬಾತನನ್ನು ಭೇಟಿಯಾಗಿದ್ದಳು. ಆಕೆಗೆ ಸಹಾಯ ಮಾಡುವ ನೆಪದಲ್ಲಿ ಆರೋಪಿಗಳು ಆಕೆಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಆ ಕಾರಿನಲ್ಲಿ ಆಗಲೇ ಮೂವರು ಪುರುಷರು ಇದ್ದರು ಎನ್ನಲಾಗಿದೆ.

ಬಳಿಕ ಆಕೆಯನ್ನು ಹೋಟೆಲ್​​​ನ ಕೋಣೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಆ ಹೀನ ಕೃತ್ಯವನ್ನು ಚಿತ್ರೀಕರಿಸಿದ್ದಾರೆ. ಒಂದಕ್ಷರ ಉಚ್ಚರಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುವುದು ಎಂದು ಬೆದರಿಕೆಯೊಡ್ಡಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಜೈಪುರದ ಹೋಟೆಲ್‌ನಲ್ಲಿ ಮುಖೇಶ್ ಗುರ್ಜರ್ ಎಂಬ ಯುವಕ ಬೆದರಿಕೆಯೊಡ್ಡಿ ಸತತ ಒಂದು ವಾರಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಸದ್ಯ 9 ಕಾಮುಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ABOUT THE AUTHOR

...view details