ಕರ್ನಾಟಕ

karnataka

ETV Bharat / bharat

ಪೈಶಾಚಿಕ ಕೃತ್ಯ: ಮನೆಗೆ ತೆರಳುತ್ತಿದ್ದ ದಂಪತಿ ತಡೆದು ಮಹಿಳೆ ಮೇಲೆ ಗ್ಯಾಂಗ್​ ರೇಪ್​ - ರಾಜಸ್ಥಾನ ಬನ್ಸ್ವಾರ ಸುದ್ದಿ

ದಂಪತಿ ಮನೆಗೆ ಹೋಗುತ್ತಿರುವಾಗ ಅವರನ್ನು ತಡೆದ ಕಾಮುಕರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯ ಗಂಡನಿಗೆ ಮನ ಬಂದಂತೆ ಥಳಿಸಿದ ಅವರು, ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಅಟ್ಟಹಾಸ ಮೆರೆದಿದ್ದಾರೆ. ಈ ಸಂಬಂಧ ಸದರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Woman gang-rape
ರಾಜಸ್ಥಾನದಲ್ಲೊಂದು ಪೈಶಾಚಿಕ ಕೃತ್ಯ

By

Published : May 26, 2020, 3:35 PM IST

ಬನ್ಸ್ವಾರ(ರಾಜಸ್ಥಾನ): ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಮೂವರು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ದಂಪತಿ ಮೇಲೆ ಹಲ್ಲೆ ನಡೆಸಿದ ಕಾಮುಕರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ಮನೆಗೆ ಹೋಗುತ್ತಿರುವಾಗ ಅವರನ್ನು ತಡೆದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಗಂಡನಿಗೆ ಮನ ಬಂದಂತೆ ಥಳಿಸಿದ ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ನಂತರ, ದುಷ್ಕರ್ಮಿಗಳು ಮಹಿಳೆಯನ್ನು ಆಕೆಯ ಮನೆಯ ಬಳಿ ಬಿಟ್ಟು ಪರಾರಿ​ ಆಗಿದ್ದಾರೆ. ಇದಾದ ಮರುದಿನ ದಂಪತಿಯು ದುಷ್ಕರ್ಮಿಗಳ ವಿರುದ್ಧ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇಸರ್ ಸಿಂಗ್ ಶೇಖಾವತ್, ಸದರ್ ಪೊಲೀಸರಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details