ರಾಜ್ಕೋಟ್(ಗುಜರಾತ್):19 ವರ್ಷದ ಯುವತಿವೋರ್ವಳನ್ನು ಅಪಹರಿಸಿದ್ದ ಮೂವರು ಕಾಮುಕರು ಆಕೆಯನ್ನ ಬೆದರಿಸಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ರಾಜ್ಕೋಟ್ನಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲವೆಂದು ತಿಳಿದುಬಂದಿದೆ.
ಯುವತಿಯನ್ನು ಅಪಹರಣ ಮಾಡಿದ್ದ ಕಾಮುಕರು ಕಾರಿನಲ್ಲಿ ಹಾಕಿಕೊಂಡು ಬಂದೂಕಿನಿಂದ ಬೆದರಿಸಿ ಈ ಅಟ್ಟಹಾಸ ಮೆರೆದಿದ್ದಾರೆ. ಮನೆಯಲ್ಲಿ ಯುವತಿ ಒಬ್ಬಳೇ ಇದ್ದಾಗ ಒಳಗೆ ನುಗ್ಗಿದ್ದ ಕಾಮುಕರು ಆಕೆಯನ್ನ ಕಿಡ್ನಾಪ್ ಮಾಡಿದ್ದರು. ನಂತರ ಆಕೆಯ ಮೇಲೆ ದುಷ್ಕೃತ್ಯವೆಸಗಿ ಮತ್ತೆ ಮನೆ ಹತ್ತಿರ ಬಿಟ್ಟು ಪರಾರಿಯಾಗಿದ್ದಾರೆ. ಇದಾದ ಬಳಿಕ ಸಂತ್ರಸ್ತೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅಲ್ಲದೆ, ಪೊಲೀಸ್ ಠಾಣೆಗೆ ತೆರಳಿ ತನ್ನ ಮೇಲೆ ದುಷ್ಕೃತ್ಯವೆಸಗಿರುವವರ ವಿರುದ್ಧ ದೂರು ನೀಡಿದ್ದಾಳೆ. ಆದರೆ ಇಲ್ಲಿಯವರೆಗೆ ಯಾವುದೇ ಆರೋಪಿಯ ಬಂಧನವಾಗಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ರಾಜ್ಕೋಟ್ ಎಸ್ಪಿ ಬಲರಾಮ್ ಮಿನಾ ಪ್ರತಿಕ್ರಿಯಿಸಿದ್ದು, ಯುವತಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದು, ಕೃತ್ಯವೆಸಗಿದವರ ಬಗ್ಗೆ ನಮಗೆ ಮಾಹಿತಿ ಗೊತ್ತಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಇನ್ನು ಕೃತ್ಯವೆಸಗಿರುವ ಮೂವರು ಅದೇ ಗ್ರಾಮದವರಾಗಿದ್ದು, ಬಿಜೆಪಿ ಸ್ಥಳೀಯ ಮುಖಂಡ ಅಮಿತ್ ಪಾಂಡಾಲ್ನ ಗೆಳೆಯರು ಎಂದು ಹೇಳಲಾಗ್ತಿದೆ. ಈ ಕೃತ್ಯದಲ್ಲಿ ವಿಪುಲ್ ಶೇಖಾನಂದನ್, ಶಾಂತಿ ಪಾಂಡಾಲ್ ಹಾಗೂ ಅಮಿತ್ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಅಮಿತ್ ಕಾಂಗ್ರೆಸ್ನಿಂದ ತಾಲೂಕು ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದ. ಇದಾದ ಬಳಿಕ ಬಿಜೆಪಿ ಸೇರಿಕೊಂಡಿದ್ದಾನೆ. ಅಮಿತ್ ಪಾಂಡಾಲ್ನ ತಾಯಿ ಗ್ರಾಮದಲ್ಲಿ ಸರ್ಪಂಚ್ ಆಗಿ ಕೆಲಸ ಮಾಡುತ್ತಿದ್ದು, ಇದೇ ಕಾರಣಕ್ಕಾಗಿ ಅವರ ಮಗನನ್ನು ಬಂಧಿಸಿಲ್ಲ ಎಂಬ ದೂರುಗಳು ಕೇಳಿಬಂದಿವೆ.