ಮುಂಬೈ: ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತನ್ನ ತಾಯಿಯ ಮೃತದೇಹದೊಂದಿಗೆ ಆರು ತಿಂಗಳಕ್ಕೂ ಹೆಚ್ಚು ಕಾಲ ಜೀವನ ಮಾಡಿರುವ ಘಟನೆ ಬಾಂದ್ರಾ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆರು ತಿಂಗಳಿನಿಂದಲೂ ತಾಯಿ ಮೃತದೇಹದೊಂದಿಗೆ ಮಗಳ ಜೀವನ! - ಮುಂಬೈ ಅಪರಾಧ ಸುದ್ದಿ
ಮಹಿಳೆಯೊಬ್ಬಳು ಕಳೆದ ಆರು ತಿಂಗಳನಿಂದಲೂ ತನ್ನ ತಾಯಿಯ ಮೃತದೇಹದೊಂದಿಗೆ ಜೀವನ ಮಾಡಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಮುಂಬೈಯಲ್ಲಿ ಬೆಳಕಿಗೆ ಬಂದಿದೆ.
53 ವರ್ಷದ ಮಗಳು ಮತ್ತು 83 ವರ್ಷದ ತಾಯಿ ಬಾಂದ್ರಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಕಳೆದ ಮಾರ್ಚ್ನಲ್ಲಿ ಅನಾರೋಗ್ಯದಿಂದ ತಾಯಿ ಸಾವನ್ನಪ್ಪಿದ್ದಾಳೆ. ತಾಯಿಯ ಸಾವು ಜೀರ್ಣಿಸಿಕೊಳ್ಳದ ಮಗಳು ಮತ್ತಷ್ಟು ಮಾನಸಿಕವಾಗಿ ಕುಗ್ಗಿದ್ದಾಳೆ. ಈ ವಿಷಯವನ್ನು ತನ್ನ ಸಂಬಂಧಿಕರಿಗೂ ಮತ್ತು ನೆರೆಹೊರೆಯವರಿಗೂ ತಿಳಸದೇ ಮೃತ ತಾಯಿಯೊಂದಿಗೆ ಕಳೆದ ಆರು ತಿಂಗಳಕ್ಕೂ ಹೆಚ್ಚು ಕಾಲ ಜೀವನ ನಡೆಸಿದ್ದಾರೆ.
ಇನ್ನು ಇವರು ವಾಸಿಸುತ್ತಿದ್ದ ಮನೆಯ ಸುತ್ತ ಕಸದ ತೊಟ್ಟಿಯಂತೆ ಇರುವುದರಿಂದ ಇಲ್ಲಿ ಜನರು ಸುಳಿಯುತ್ತಿರಲಿಲ್ಲ. ಹೀಗಾಗಿ ಈ ವಿಷಯ ಬೆಳಕಿಗೆ ಬಂದಿರಲಿಲ್ಲ. ಮಹಿಳೆ ತನ್ನ ಮಲವನ್ನು ಕಿಟಕಿಯಿಂದ ಎಸೆಯುತ್ತಿರುವುದರಿಂದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ಮನೆಗೆ ಪೊಲೀಸರು ಭೇಟಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಕೊಳೆತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.