ಹಿಮಾಚಲ ಪ್ರದೇಶ:ಗಂಡ, ಇಬ್ಬರು ಮಕ್ಕಳಿದ್ದರೂ, ಪ್ರೀತಿಯ ಬಲೆಗೆ ಬಿದ್ದ ಯುವತಿ ಆತನೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ಮನೆಬಿಟ್ಟು ಬಂದಿದ್ದು, ಇದೀಗ ಪ್ರೇಯಸಿ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿರುವ ಘಟನೆ ನಡೆದಿದೆ.
ಹಿಮಾಚಲ ಪ್ರದೇಶದ ಪಾವೊಂಟ್ ಸಾಹಿಬ್ ಎಂಬಲ್ಲಿ ಈ ಪ್ರಕರಣ ನಡೆದಿದೆ. ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಯುವತಿಗೆ ಲೊಕೇಶ್ ಕುಮಾರ್ ಪರಿಚಯವಾಗಿದ್ದಾನೆ. ಈ ವೇಳೆ ಆತನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಅದರ ಜತೆಗೆ ತನ್ನ ಕುಟುಂಬ ಬಿಟ್ಟು ಆತನೊಂದಿಗೆ ಸಂಸಾರ ನಡೆಸಲು ಮನೆಬಿಟ್ಟು ಬಂದಿದ್ದಾಳೆ. ಎರಡು ತಿಂಗಳ ಲೊಕೇಶ್ನಿಂದಿಗೆ ಜೀವನ ನಡೆಸಿರುವ ಯುವತಿಗೆ ಕಿರುಕುಳ ನೀಡಲು ಮುಂದಾಗಿದ್ದು, ಮನೆಯಿಂದ ಹೊರ ಹಾಕಿದ್ದಾನೆ.