ಕರ್ನಾಟಕ

karnataka

ETV Bharat / bharat

ವೈದ್ಯೆ​ ಮೇಲೆ ಸಾಮೂಹಿಕ ಅತ್ಯಾಚಾರ... ಅರಣ್ಯ ಪ್ರದೇಶದಲ್ಲಿ ಬಿಟ್ಟು ಪರಾರಿ!

ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಮಹಿಳಾ ಡಾಕ್ಟರ್​​ ಮೇಲೆ ಕಾಮುಕರು ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

By

Published : Aug 19, 2019, 10:17 PM IST

ನವದೆಹಲಿ: ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಮಹಿಳಾ ಡಾಕ್ಟರ್​ ಮೇಲೆ ಮೂವರು ಕಾಮುಕರು ಅತ್ಯಾಚಾರ ಮಾಡಿ, ತದನಂತರ ಆಕೆಯನ್ನ ಅರಣ್ಯ ಪ್ರದೇಶದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.

ಆಗಸ್ಟ್​​ 9ರಂದು ಈ ಅಮಾನವೀಯ ಕೃತ್ಯ ನಡೆದಿದ್ದು, ಪರಿದಾಬಾದ್​​ನ ನಿವಾಸಿಯಾಗಿದ್ದ ವೈದ್ಯೆ ದೆವಟಾ ಗ್ರಾಮದಲ್ಲಿರುವ ತನ್ನ ಆಸ್ಪತ್ರೆಗೆ ತೆರಳಿದ್ದಳು. ಈ ವೇಳೆ ಅಲ್ಲಿಂದ ವಾಪಸ್​ ಕಾರಿನಲ್ಲಿ ಬರುತ್ತಿದ್ದಾಗ ಮೂವರು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಆಕೆಯನ್ನ ಅಡಿಗಟ್ಟಿ ದುಷ್ಕೃತ್ಯವೆಸಗಿದ್ದಾರೆ.

ಬೈಕ್​ ನಲ್ಲಿ ಫಾಲೋ ಮಾಡಿಕೊಂಡು ಬಂದಿರುವ ಕಾಮುಕರು ನಡುರಸ್ತೆಯಲ್ಲಿ ಅಡ್ಡಗಟ್ಟಿದ್ದು,ವೈದ್ಯೆಯನ್ನ ಅಪಹರಣ ಮಾಡಿ ಕಾಡಿನೊಳಗೆ ಕರೆದೊಯ್ದು ಈ ಕೃತ್ಯವೆಸಗಿದ್ದಾರೆ. ತದನಂತರ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ, ಪೊಲೀಸರ ಬಳಿ ತೆರಳಿ ದೂರು ದಾಖಲು ಮಾಡಿದ್ದಾಳೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಇನ್ನು ದುಷ್ಕೃತ್ಯ ವೆಸಗಿರುವ ಕಾಮುಕರು ಇದರ ಬಗ್ಗೆ ಬೇರೆಯವರಿಗೆ ಮಾಹಿತಿ ನೀಡಿದ್ರೆ, ಜೀವಂತವಾಗಿ ಕೊಲೆ ಮಾಡುವ ಬೆದರಿಕೆ ಹಾಕಿದ್ದರಂತೆ. ಇನ್ನು ಮಹಿಳೆ ಹೇಳಿಕೆ ದಾಖಲು ಮಾಡಿಕೊಂಡಿರುವ ಪೊಲೀಸರು ಎಲ್ಲ ರೀತಿಯ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details