ಕರ್ನಾಟಕ

karnataka

ETV Bharat / bharat

ಸೂಟ್​ಕೇಸ್​​ನಲ್ಲಿ ಯುವತಿಯ ಮೃತ ದೇಹ ಪತ್ತೆ​​ - ಗಾಝಿಯಾಬಾದ್​ನಲ್ಲಿ ಸೂಟ್​ಕೇಸ್​​ನಲ್ಲಿ ಯುವತಿಯ ಮೃತ ದೇಹ ಪತ್ತೆ​​

ಕೈ ಕಾಲುಗಳು ಕಟ್ಟಿದ ಅವಸ್ಥೆಯಲ್ಲಿ ಯುವತಿಯೊಬ್ಬಳ ಮೃತದೇಹ ಸೂಟ್​ ಕೇಸ್​ನಲ್ಲಿ ಪತ್ತೆಯಾದ ಘಟನೆ ​ಉತ್ತರ ಪ್ರದೇಶದ ಗಾಝಿಯಾಬಾದ್​ ನಗರದಲ್ಲಿ ನಡೆದಿದೆ.

woman dead body found in suitcase in Arthala area of Sahibabad
ಯುವತಿಯ ಮೃತ ದೇಹ ಪತ್ತೆ​​

By

Published : Jul 27, 2020, 5:13 PM IST

ಗಾಜಿಯಾಬಾದ್ (ನವದೆಹಲಿ) : ನಗರದ ಸಾಹಿಬಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಥ್ಲಾ ಪ್ರದೇಶದಲ್ಲಿ ಸೂಟ್​ಕೇಸ್​​ನಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ.

ಮೃತ ಯುವತಿಯ ವಯಸ್ಸು 25 ಇರಬಹುದು ಎಂದು ಅಂದಾಜಿಸಲಾಗಿದ್ದು, ಗುರುತು ಪತ್ತೆಯಾಗಿಲ್ಲ. ಕೈಯಲ್ಲಿ ಮದರಂಗಿಯ ವರ್ಣ ಕಂಡು ಬಂದಿದ್ದು, ಇತ್ತೀಚೆಗೆ ಮದುವೆಯಾಗಿರಬಹುದು ಎಂದು ಶಂಕಿಸಲಾಗಿದೆ. ಕೊರೊನಾ ನಿಯಂತ್ರಿಸುವ ಸಲುವಾಗಿ ನಗರದಲ್ಲಿ 55 ಗಂಟೆಗಳ ಲಾಕ್​ ಡೌನ್​ ಘೋಷಿಸಲಾಗಿತ್ತು, ಭಾನುವಾರ ರಾತ್ರಿಯೂ ಲಾಕ್​ಡೌನ್ ಮುಂದುವರೆದಿತ್ತು. ಸೋಮವಾರ ಬೆಳಗ್ಗೆ ಸ್ಥಳೀಯರು ಸೂಟ್​ ಕೇಸ್​ನಲ್ಲಿ ಶವ ಇರುವುದನ್ನು ಗಮನಿಸಿದ್ದಾರೆ. ಲಾಕ್ ಡೌನ್​ ವೇಳೆಯಲ್ಲಿ ಶವ ತಂದು ಬಿಸಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ನಿವಾಸಿ ಮೊಹಮ್ಮದ್​ ಶರೀಫ್​ ಎಂಬುವರು ಅನುಮಾನಾಸ್ಪದ ಸೂಟ್​ಕೇಸ್​ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸೂಟ್​ಕೇಸ್​ ತೆರೆದಾಗ ಮೃತದೇಹ ಕಂಡು ಬಂದಿದೆ. ಲಾಕ್​ ಡೌನ್​ ನಿಮಿತ್ತ ಪೊಲೀಸರು ಗಸ್ತಿನಲ್ಲಿದ್ದರೂ, ಈ ರೀತಿ ಶವ ತಂದು ಬಿಸಾಡಿರುವುದು ಹೇಗೆ ಗಮನಕ್ಕೆ ಬಂದಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೂಟ್​ಕೇಸ್​ನಲ್ಲಿ ಪತ್ತೆಯಾದ ಯುವತಿಯ ಮೃತ ದೇಹವು ಕೈ ಕಾಲುಗಳು ಕಟ್ಟಿದ ರೀತಿಯಲ್ಲಿ ಇತ್ತು. ಕೈಯಲ್ಲಿ ಮದರಂಗಿ ಕಂಡು ಬಂದಿದ್ದು, ಹಣೆ ಮೇಲಿನ ಸಿಂಧೂರ ಒತ್ತಾಯದಿಂದ ಅಳಿಸಿ ಹಾಕಿದ ರೀತಿಯಲ್ಲಿತ್ತು. ಸುಮಾರು 5 ಗಂಟೆಗಳ ಮೊದಲು ಶವವನ್ನು ತಂದು ಇಟ್ಟು ಹೋಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಯುವತಿಯ ಗುರುತು ಪತ್ತೆ ಹಚ್ಚುವುದರಲ್ಲಿ ನಿರತರಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೆ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ABOUT THE AUTHOR

...view details