ಫತೇಪುರ್ (ಉ.ಪ್ರ):ಉತ್ತರಪ್ರದೇಶದ ಹಲವು ಕಡೆ ಧಾರಾಕಾರ ಮಳೆಯಾಗುತ್ತಿದ್ದು, ಹಲವರು ಬಲಿಯಾಗಿದ್ದಾರೆ. ಇಂದು ಇಲ್ಲಿನ ಫತೇಪುರ್ ಜಿಲ್ಲೆಯ ದನ್ವಾ ಖೇಡಾ ಪ್ರದೇಶದಲ್ಲಿ ಮಳೆಯಿಂದಾಗಿ ಮನೆ ಮುಸಿದ ಪರಿಣಾಮ 27 ವರ್ಷದ ಮಹಿಳೆ ಹಾಗೂ ಆಕೆಯ ಮಗು ಮೃತಪಟ್ಟಿರುವ ಘಟನೆ ನಡೆದಿದೆ.
ಮಳೆಯಿಂದಾಗಿ ಮನೆ ಕುಸಿದು ತಾಯಿ-ಮಗು ಬಲಿ - ಫತೇಪುರ್ ಜಿಲ್ಲೆಯ
ಮಣ್ಣಿನಿಂದ ನಿರ್ಮಿಸಿಕೊಂಡಿದ್ದ ಕಚ್ಚಾ ಮನೆ ಮಳೆಯಾರ್ಭಟಕ್ಕೆ ಕುಸಿದು ಬಿದ್ದಿದೆ. ಘಟನೆಯಲ್ಲಿ ತಾಯಿ ಸರಿತ ಹಾಗೂ 5 ವರ್ಷದ ಮಗು ಸುಹಾನಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಳೆಯಿಂದಾಗಿ ಮನೆ ಕುಸಿದು ತಾಯಿ, ಮಗು ಬಲಿ
ಮಣ್ಣಿನಿಂದ ನಿರ್ಮಿಸಿಕೊಂಡಿದ್ದ ಕಚ್ಚಾ ಮನೆ ಮಳೆಯಾರ್ಭಟಕ್ಕೆ ಕುಸಿದು ಬಿದ್ದಿದೆ. ಘಟನೆಯಲ್ಲಿ ತಾಯಿ ಸರಿತ ಹಾಗೂ 5 ವರ್ಷದ ಮಗು ಸುಹಾನಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಘಟನೆಯಲ್ಲಿ ಇನ್ನಿಬ್ಬರು ಮಕ್ಕಳಿಗೂ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.