ಹೈದರಾಬಾದ್:ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಗ್ರಾಹಕನೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಆಕೆಯನ್ನ ಬೆತ್ತಲೆಗೊಳಿಸಿರುವ ಅಮಾನವೀಯ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಗ್ರಾಹಕನೊಂದಿಗೆ ಹಾಸಿಗೆ ಹಂಚಿಕೊಳ್ಳಲು ಹಿಂದೇಟು... ಬಾರ್ ಡ್ಯಾನ್ಸರ್ ಬೆತ್ತಲೆಗೊಳಿಸಿದ ಸಹ ಡ್ಯಾನ್ಸರ್! - ದೈಹಿಕ ಸಂಪರ್ಕ
ಬಾರ್ಗೆ ಬರುವ ಗ್ರಾಹಕರೊಂದಿಗೆ ಬಾರ್ ಡ್ಯಾನ್ಸರ್ ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದಳೆಂಬ ಕಾರಣಕ್ಕಾಗಿ ಆಕೆಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಇಲ್ಲಿನ ಪಂಜಗುಟ್ಟಾದಲ್ಲಿ ಘಟನೆ ನಡೆದಿದ್ದು, ಈಗಾಗಲೇ ಪೊಲೀಸರು ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯ ಬಂಧನ ಮಾಡಿದ್ದಾರೆ. ಬಾರ್ನಲ್ಲಿ ಯುವತಿಯೊಬ್ಬಳು ತನ್ನ ಸಹ ಡ್ಯಾನ್ಸರ್ ಜತೆ ಕುಣಿಯುತ್ತಿದ್ದ ವೇಳೆ ಗ್ರಾಹಕನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ನಿರಾಕರಿಸಿದ್ದರಿಂದ ಆಕೆಯನ್ನ ಎಲ್ಲರೂ ಸೇರಿ ಬೆತ್ತಲೆ ಮಾಡಿ, ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ಆಕೆ ಬೇಗಂಪೇಟೆಯಲ್ಲಿರುವ ಬಾರ್ನಲ್ಲಿ ಡ್ಯಾನ್ಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಇದರ ಬೆನ್ನಲ್ಲೇ ಆಕೆಗೆ ಬಾರ್ನ ಮ್ಯಾನೇಜ್ಮೆಂಟ್ ಕೂಡ ಗ್ರಾಹಕರೊಂದಿಗೆ ಸಹಕರಿಸುವಂತೆ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳ ವಿರುದ್ಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.