ಕರ್ನಾಟಕ

karnataka

ETV Bharat / bharat

ಹೆಗಲ ಮೇಲೆ ಮಗು ಹೊತ್ತುಕೊಂಡು ಡ್ಯುಟಿ ಮಾಡಿದ ಮಹಿಳಾ ಪೊಲೀಸ್​ - ಹೆಗಲ ಮೇಲೆ ಮಗು ಹೊತ್ತು ಡ್ಯುಟಿ

ಮಗುವನ್ನ ಹೆಗಲ ಮೇಲೆ ಹೊತ್ತುಕೊಂಡು ಮಹಿಳಾ ಪೊಲೀಸ್​ ಪೇದೆಯೊಬ್ಬರು ಕರ್ತವ್ಯ ನಿರ್ವಹಿಸಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

Woman cop brings infant son to CM duty in Noida
Woman cop brings infant son to CM duty in Noida

By

Published : Mar 3, 2020, 8:25 AM IST

ನೋಯ್ಡಾ:ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಹೆಗಲ ಮೇಲೆ ಮಗು ಹೊತ್ತುಕೊಂಡು ತಮ್ಮ ಡ್ಯುಟಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹೆಗಲ ಮೇಲೆ ಮಗು ಹೊತ್ತುಕೊಂಡು ಡ್ಯುಟಿ

ಗೌತಮ್​ ಬುದ್ಧ ನಗರದಲ್ಲಿ ಅಭಿವೃದ್ಧಿ ಕಾರ್ಯಕ್ರಮವೊಂದರ ಶಂಕು ಸ್ಥಾಪನೆ ಮಾಡಲು ಯೋಗಿ ಆದಿತ್ಯನಾಥ್​ ಆಗಮಿಸಿದ್ದರು. ಈ ವೇಳೇ ಪ್ರೀತಿ ರಾಣಿ ಎಂಬ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​​ ತನ್ನ ಒಂದೂವರೆ ವರ್ಷದ ಮಗುವನ್ನ ಹೆಗಲ ಮೇಲೆ ಹೊತ್ತುಕೊಂಡು ತನಗೆ ನೀಡಿದ್ದ ಜವಾಬ್ದಾರಿ ನಿಭಾಯಿಸಿದ್ದಾರೆ.

ಈ ಬಗ್ಗೆ ಅವರನ್ನ ಪ್ರಶ್ನೆ ಮಾಡಿದಾಗ ನನ್ನ ಗಂಡ ಪರೀಕ್ಷೆ ಬರೆಯಲು ಹೋಗಿದ್ದರಿಂದ ಮಗು ನೋಡಿಕೊಳ್ಳಲು ಯಾರು ಇರಲಿಲ್ಲ. ಹೀಗಾಗಿ ತಾವು ಮಗನೊಂದಿಗೆ ತಮಗೆ ನೀಡಿದ್ದ ಡ್ಯುಟಿ ಮಾಡಲು ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಪ್ರೀತಿ ರಾಣಿ ಗ್ರೇಟರ್​ ನೋಯ್ಡಾದ ದಾದ್ರಿ ಪೊಲೀಸ್​ ಠಾಣೆಯಲ್ಲಿ ಮಹಿಳಾ ಪೊಲೀಸ್​ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ABOUT THE AUTHOR

...view details