ಕರ್ನಾಟಕ

karnataka

ETV Bharat / bharat

ಲಾಕ್ ಡೌನ್‌ನಿಂದ ಮದುವೆ ಮುಂದೂಡಿಕೆ: ಮನನೊಂದು ಯುವತಿ ಆತ್ಮಹತ್ಯೆ - Anantapur suicide

ಏಪ್ರಿಲ್​ನಲ್ಲಿ ನಡೆಯಬೇಕಿದ್ದ ಮದುವೆ ಲಾಕ್​ ಡೌನ್‌ನಿಂದಾಗಿ ಮುಂದೂಡಿಕೆಯಾಗಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಧರ್ಮವರಂ ಜಿಲ್ಲೆಯಲ್ಲಿ ನಡೆದಿದೆ.

Woman commits suicide upset over postponement of marriage
Woman commits suicide upset over postponement of marriage

By

Published : Apr 19, 2020, 10:58 AM IST

ಅನಂತಪುರ (ಆಂಧ್ರಪ್ರದೇಶ) : ಲಾಕ್ ಡೌನ್​ ಹಿನ್ನೆಲೆ ಮದುವೆ ಮುಂದೂಡಿಕೆಯಾಗಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಧರ್ಮವರಂ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ನಡೆದಿದೆ.

ಹಿಮಾವತಿ (25) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಯುವತಿಗೆ ಕೊತ್ತಪೇಟೆಯ ಯುವಕನೊಂದಿಗೆ ನಿಶ್ಚಿತಾರ್ಥ ಆಗಿತ್ತು. ಏಪ್ರಿಲ್​ನಲ್ಲಿ ಮದುವೆ ಮಾಡುವುದಾಗಿ ನಿರ್ಧರಿಸಲಾಗಿತ್ತು. ಆದರೆ, ದೇಶದಾದ್ಯಂತ ಕೊರೊನಾ ಲಾಕ್ ಡೌನ್​ ಘೋಷಿಸಿರುವ ಹಿನ್ನೆಲೆ ಮದುವೆ ಸಮಾರಂಭವನ್ನು ಮುಂದೂಡಲಾಗಿದೆ. ಇದರಿಂದ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆ ನಡೆದ ತಕ್ಷಣ ಕುಟುಂಬಸ್ಥರು ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details