ಕರ್ನಾಟಕ

karnataka

ETV Bharat / bharat

ಮಹಿಳೆ ಮೇಲೆ 139 ಜನರಿಂದ ಲೈಂಗಿಕ ದೌರ್ಜನ್ಯ ಆರೋಪ! - ಹೈದರಾಬಾದ್​ ಪೊಲೀಸರು

ಕಳೆದ ಹಲವು ವರ್ಷಗಳಿಂದ ತಾನು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದು, 139 ಜನರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ದೂರು ನೀಡಿದ್ದಾಳೆ ಎಂದು ಹೈದರಾಬಾದ್​ ಪೊಲೀಸರು ತಿಳಿಸಿದ್ದಾರೆ.

Woman claims 139 people sexually assaulted her
ಮಹಿಳೆ ಮೇಲೆ 139 ಜನರಿಂದ ನಿರಂತರ ಲೈಂಗಿಕ ದೌರ್ಜನ್ಯ....

By

Published : Aug 22, 2020, 8:03 AM IST

ಹೈದರಾಬಾದ್​(ತೆಲಂಗಾಣ): 25 ವರ್ಷದ ಮಹಿಳೆಯೊಬ್ಬಳು ಕಳೆದ ಹಲವು ವರ್ಷಗಳಿಂದ ತಾನು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದು, 139 ಜನರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ ಎಂದು ಹೈದರಾಬಾದ್​ ಪೊಲೀಸರು ತಿಳಿಸಿದ್ದಾರೆ.

2010ರಲ್ಲಿ ವಿವಾಹವಾದ ಈಕೆ ಒಂದು ವರ್ಷದೊಳಗೆ ವಿಚ್ಛೇದನ ಪಡೆದಿದ್ದಾಳೆ. ದೂರಿನಲ್ಲಿ ಆಕೆ, ತನ್ನ ಮಾಜಿ ಗಂಡನ ಕುಟುಂಬದ ಕೆಲ ಸದಸ್ಯರೂ ತನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾಳೆ.

ದೂರು ನೀಡಿದ ನಂತರ, ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪುಂಜಗುಟ್ಟ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯ ಪ್ರಕಾರ, 139 ಜನರು ವಿವಿಧ ಸ್ಥಳಗಳಲ್ಲಿ ಬೆದರಿಸಿ ಲೈಂಗಿಕ ಕಿರುಕುಳ ನೀಡಿ ಶೋಷಿಸಿದ್ದಾರೆ. ಭಯ ಮತ್ತು ಆರೋಪಿಗಳ ಬೆದರಿಕೆಗಳಿಂದಾಗಿ ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ABOUT THE AUTHOR

...view details