ಅಲಿಪುರ್(ನವದೆಹಲಿ):ಗೆಳೆಯನೊಂದಿಗೆ ಹುಟ್ದಬ್ಬ ಆಚರಿಸಿಕೊಳ್ಳಲು ರೂಂ ಕಾಯ್ದಿರಿಸಿದ್ದ ಯುವತಿ ಕೊಲೆಯಾಗಿರುವ ಘಟನೆ ನವದೆಹಲಿಯ ಅಲಿಪುರ್ದಲ್ಲಿ ನಡೆದಿದೆ.
21 ವರ್ಷದ ಯುವತಿ 33 ವರ್ಷದ ಗೆಳೆಯನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಖುಷಿಯಲ್ಲಿದ್ದಳು. ಇದಕ್ಕಾಗಿ ಆಕೆ ನವದೆಹಲಿಯ ಅಲಿಪುರ್ದಲ್ಲಿ ಹೊಟೇಲ್ ಬುಕ್ ಮಾಡಿದ್ದಾಳೆ. ರಾತ್ರಿ ವೇಳೆ ಜೋರಾಗಿ ಮ್ಯೂಸಿಕ್ ಪ್ಲೇ ಮಾಡಿಕೊಂಡು ಇಬ್ಬರೂ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಇಬ್ಬರೂ ಸೇರಿ ಮದ್ಯಪಾನವನ್ನೂ ಮಾಡಿದ್ದಾರೆ. ಕುಡಿದ ನಶೆಯಲ್ಲಿದ್ದ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರೊಚ್ಚಿಗೆದ್ದ ಯುವಕ ತನ್ನ ಪ್ರಿಯತಮೆಯ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕೆಯೂ ಸಹ ತಿರುಗಿ ಆತನಿಗೆ ಹೊಡೆದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಯುವತಿ ಮದ್ಯಪಾನ ಮಾಡುತ್ತಿದ್ದ ಗ್ಲಾಸ್ ತೆಗೆದುಕೊಂಡು ಆತನ ಮೇಲೆ ಹಾಕಿದ್ದಾಳೆ.ಪರಿಣಾಮ ಜಗಳ ತಾರಕಕ್ಕೇರಿದೆ. ಆಕ್ರೋಶಗೊಂಡ ಯುವಕ ಕೊನೆಗೆ ಕೊಲೆ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.