ಗುರುಗ್ರಾಮ( ಹರಿಯಾಣ): ಅಕ್ರಮ ಸಂಬಂಧದ ಹಿನ್ನೆಲೆ ಬಿಜೆಪಿಯ ಮಹಿಳಾ ಮುಖಂಡರೊಬ್ಬರನ್ನ ಆಕೆಯ ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಅಕ್ರಮ ಸಂಬಂಧ ಶಂಕೆ: ಬಿಜೆಪಿ ನಾಯಕಿ ಕೊಂದ ಪತಿ - ಬಿಜೆಪಿ ಮುಖಂಡೆಯನ್ನು ಕೊಂದ ಪತಿ
ಬಿಜೆಪಿ ಕಿಸಾನ್ ಮೋರ್ಚಾದ ರಾಜ್ಯ ಕಾರ್ಯದರ್ಶಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಪತಿಯೇ ಹತ್ಯೆ ಮಾಡಿದ್ದಾನೆ.
![ಅಕ್ರಮ ಸಂಬಂಧ ಶಂಕೆ: ಬಿಜೆಪಿ ನಾಯಕಿ ಕೊಂದ ಪತಿ ಬಿಜೆಪಿ ಮುಖಂಡೆಯ ಕೊಲೆ , Murder of BJP leader](https://etvbharatimages.akamaized.net/etvbharat/prod-images/768-512-6018014-thumbnail-3x2-nin.jpg)
ಬಿಜೆಪಿ ಮುಖಂಡೆಯ ಕೊಲೆ
ಬಿಜೆಪಿ ಕಿಸಾನ್ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮುನೀಶ್ ಗೋಧಾರ ಶನಿವಾರ ಸಂಜೆ ತನ್ನ ಸಹೋದರಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದಾಗ ಪತಿ ಸುನಿಲ್ ಗೋಧಾರ ರಿವಾಲ್ವರ್‌ನಿಂದ ಆಕೆಯ ಎದೆಗೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಪರಿಣಾಮ ಮುನೀಶ್ ಗೋಧಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಖಾಸಗಿ ಕಂಪನಿಯಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸುನಿಲ್ ಗೋಧಾರ, ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಗುರುಗ್ರಾಮದ ಠಾಣೆಯಲ್ಲಿ ಸುನೀಲ್ ಗೋಧಾರ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated : Feb 10, 2020, 9:01 AM IST