ರಿಷಿಕೇಶ್( ಉತ್ತರಾಖಂಡ್): ಏಮ್ಸ್ನಲ್ಲಿ ರೋಗಿಯೊಬ್ಬರನ್ನು ಭೇಟಿಯಾಗಲು ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಪ್ರಕರಣ ಸೇರಿ ಉತ್ತರಾಖಂಡದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 61 ಕ್ಕೆ ಏರಿದೆ.
ಏಮ್ಸ್ಗೆ ಬಂದಿದ್ದ ಮಹಿಳೆಗೆ ಪಾಸಿಟಿವ್...ಉತ್ತರಾಖಂಡ್ನಲ್ಲಿ 61ಕ್ಕೇರಿದ ಕೊರೊನಾ ಸೋಂಕಿತರು - ರಿಷಿಕೇಶ್
ರಿಷಿಕೇಶ್ನ ಏಮ್ಸ್ನಲ್ಲಿ ರೋಗಿಯೊಬ್ಬರನ್ನು ಭೇಟಿಯಾಗಲು ಬರುತ್ತಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದರೊಂದಿಗೆ ಉತ್ತರಾಖಂಡದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 61 ಕ್ಕೆ ಏರಿದೆ.
ರಿಷಿಕೇಶ್ನ ಏಮ್ಸ್
ಸೋಮವಾರ ತಡರಾತ್ರಿ ಆಕೆಯ ಸ್ವ್ಯಾಬ್ ಮಾದರಿ ಪರೀಕ್ಷೆ ನಡೆಸಿದ್ದು, ಕೊರೊನಾ ಇರುವುದು ದೃಢಪಟ್ಟಿದೆ ಎಂದು ಹೆಚ್ಚುವರಿ ಎಸ್‌ಡಿಎಂ ಅಪೂರ್ವಾ ಪಾಂಡೆ ತಿಳಿಸಿದ್ದಾರೆ.
ಅವರು ಆಸ್ಪತ್ರೆಯ ಯುರಾಲಜಿ ವಾರ್ಡ್‌ನಲ್ಲಿ ರೋಗಿಯೊಬ್ಬರನ್ನು ಭೇಟಿಯಾಗುತ್ತಿದ್ದರು. ಹೀಗಾಗಿ ಅಲ್ಲಿಯೇ ಅವರು ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರಬಹುದು ಎಂದು ಪಾಂಡೆ ಹೇಳಿದರು. ಸದ್ಯ ಆಕೆಯನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿದ್ದು, ಅವರೊಂದಿಗೆ ಸಂಪರ್ಕಕ್ಕೆ ಬಂದಿರುವ ಜನರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.