ಕರ್ನಾಟಕ

karnataka

ETV Bharat / bharat

ದೂರು ನೀಡಲು ತೆರಳುತ್ತಿದ್ದಾಗ ಯುವತಿ ಮೇಲೆ ಅತ್ಯಾಚಾರ: ಇಬ್ಬರು ವಶಕ್ಕೆ - ಉತ್ತರ ಪ್ರದೇಶ ಸುದ್ದಿ

ಬೇರೊಂದು ಘಟನೆ ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳುವ ವೇಳೆ ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಈ ಹಿನ್ನೆಲೆ ದೂರು ದಾಖಲಾಗಿದ್ದು, ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

woman-allegedly-gang-raped-in-uttar-pradeshs-shamli-three-booked
ದೂರು ನೀಡಲು ಠಾಣೆಗೆ ತೆರಳುವಾಗ ಮೂವರಿಂದ ಅತ್ಯಾಚಾರ

By

Published : Nov 23, 2020, 1:49 PM IST

ಶಾಮ್ಲಿ (ಉತ್ತರ ಪ್ರದೇಶ):ಯುವತಿಯನ್ನು ಮೂವರು ಅಡ್ಡಗಟ್ಟಿ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ಶಾಮ್ಲಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಸಂತ್ರಸ್ತೆಯ ಕುಟುಂಬಸ್ಥರ ಪ್ರಕಾರ, ಯುವತಿ ಬೇರೊಂದು ಪ್ರಕರಣದ ಸಂಬಂಧ ದೂರು ನೀಡಲು ಜಿನ್ಹಾನ ಪೊಲೀಸ್ ಠಾಣೆಗೆ ತೆರಳುತ್ತಿದ್ದ ವೇಳೆ ಮೂವರು ಅತ್ಯಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆ ಮನೆಗೆ ಸೇರುವ ಮೊದಲು ಗಾಯಗೊಂಡ ಸ್ಥಿತಿಯಲ್ಲಿದ್ದಳು, ಅಲ್ಲದೇ ನಡೆದ ವಿಚಾರವನ್ನು ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದಳು. ಇದಾದ ಬಳಿಕ ಕುಟುಂಬಸ್ಥರು ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆ ಕುಟುಂಬಸ್ಥರ ದೂರಿನನ್ವಯ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶಾಮ್ಲಿಯ ಪೊಲೀಸ್ ವರಿಷ್ಠಾಧಿಕಾರಿ ನಿತ್ಯಾನಂದ ರಾಯ್​​ ತಿಳಿಸಿದ್ದಾರೆ.

ಅಲ್ಲದೇ ಯುವತಿಯನ್ನು ವೈದ್ಯಕೀಯ ಚಿಕಿತ್ಸಗೆ ಒಳಪಡಿಸಲಾಗಿದೆ ಎಂದಿದ್ದಾರೆ. ಮೂವರ ವ್ಯಕ್ತಿಗಳ ಜೊತೆ ಭೂಮಿ ವ್ಯವಹಾರ ಸಂಬಂಧ ತಕರಾರಿದ್ದು, ಇದೇ ಕಾರಣಕ್ಕೆ ಅತ್ಯಾಚಾರದ ಕೃತ್ಯ ಎಸಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ABOUT THE AUTHOR

...view details