ಉನ್ನಾವೋ/ ಉತ್ತರಪ್ರದೇಶ: ಮಹಿಳೆಯೊಬ್ಬರ ಮೇಲೆ ಆಕೆಯ ಸಂಬಂಧಿ ಮತ್ತು ಅವನ ಸ್ನೇಹಿತ ವಾಹನದಲ್ಲಿ ಹೋಗುವ ವೇಳೆ ಅತ್ಯಾಚಾರ ಮತ್ತು ಕೊಲೆ ಮಾಡಲು ಯತ್ನಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾ - ಲಖನೌ ಹೆದ್ದಾರಿಯಲ್ಲಿ ನಡೆದಿದೆ.
ಮಹಿಳೆ ಮೇಲೆ ಅತ್ಯಾಚಾರ, ಕೊಲೆಗೆ ಯತ್ನ: ಕೊನೆಗೆ ಹೆದ್ದಾರಿಯಲ್ಲೇ ಬಿಟ್ಟು ಎಸ್ಕೇಪ್ - ಸಂಬಂಧಿಯಿಂದಲೇ ಮಹಿಳೆ ಮೇಲೆ ಅತ್ಯಾಚಾರ ಯತ್ನ
ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿದ್ದು, ಮಹಿಳೆಯೊಬ್ಬಳ ಸಂಬಂಧಿ ಮತ್ತು ಆತನ ಸ್ನೇಹಿತ ಹೆದ್ದಾರಿಯಲ್ಲೇ ವಾಹನದೊಳಗೆ ಆಕೆ ಮೇಲೆ ಅತ್ಯಾಚಾರ ಹಾಗೂ ಕೊಲೆಗೆ ಯತ್ನಿಸಿ, ನಂತರ ಸಂತ್ರಸ್ತೆಯನ್ನು ರಸ್ತೆಯಲ್ಲೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ನಂತರ ಆಕೆಯನ್ನು ರಸ್ತೆಯಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಅವರನ್ನು ಬಿಡದೇ ಬೆನ್ನಟ್ಟಿದ್ದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಖನೌ ನಿವಾಸಿಯಾದ 29 ವರ್ಷ ವಯಸ್ಸಿನ ಸಂತ್ರಸ್ತ ಮಹಿಳೆಯನ್ನು ಆಕೆಯ ಸಂಬಂಧಿ ಜಮೀನು ಖರೀದಿ ವಿಚಾರವಾಗಿ ತನ್ನೊಂದಿಗೆ ಉನ್ನಾವೊ ಜಿಲ್ಲೆಯ ಬಂಗರ್ಮೌಗೆ ಬರಲು ಕೇಳಿಕೊಂಡಿದ್ದಾರೆ. ಅವನು ಅನಕ್ಷರಸ್ಥನಾಗಿದ್ದರಿಂದ, ಭೂ-ಸಂಬಂಧಿತ ಕೆಲವು ಸಮಸ್ಯೆಗಳಿಗೆ ಸಹಾಯ ಮಾಡಲು ಮಹಿಳೆ ಹೋಗಿದ್ದಾರೆ. ಅವರೊಂದಿಗೆ ಸಂಬಂಧಿಯ ಸ್ನೇಹಿತ ಕೂಡ ಬಂದಿದ್ದಾನೆ. ಮೂವರು ವಾಹನದಲ್ಲಿ ಜಮೀನು ಇರುವ ಸ್ಥಳಕ್ಕೆ ತೆರಳುತ್ತಿದ್ದಾಗ, ಸಂಬಂಧಿ ಹಾಗೂ ಆತನ ಸ್ನೇಹಿತ ಇಬ್ಬರೂ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ.
ನಂತರ ವಾಹನವು ಜನರಿರುವ ಸ್ಥಳಕ್ಕೆ ಬಂದಾಗ ಆಕೆಯನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆದರೆ, ಸ್ಥಳೀಯರು ಹಾಗೂ ಸಂತ್ರಸ್ತೆ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಮಿಸಿದ ಪೊಲೀಸರು ಆರೋಪಿಗಳ ಬೆನ್ನತ್ತಿ ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.