ನವದೆಹಲಿ: ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹದಗೆಟ್ಟಿದ್ದು, ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಸತತವಾಗಿ ಶಾಂತಿ ಮಾತುಕತೆಗಳು ಜಾರಿಯಲ್ಲಿವೆ. ಇಂದೂ ಈ ಸಂಬಂಧ ಸಮಾಲೋಚನೆ ಮತ್ತು ಸಹಕಾರ ಕಾರ್ಯ ಕಾರ್ಯವಿಧಾನದ ಸಭೆ (ಡಬ್ಲ್ಯುಎಂಸಿಸಿ) ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ಭಾರತ - ಚೀನಾ ಗಡಿ ಬಿಕ್ಕಟ್ಟು: ಇಂದು ಡಬ್ಲ್ಯೂಎಂಸಿಸಿ ಸಭೆ ಸಾಧ್ಯತೆ - ಭಾರತ-ಚೀನಾ ಗಡಿ ಬಿಕ್ಕಟ್ಟು
ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟು ಸಂಬಂಧ ಇಂದು ಡಬ್ಲ್ಯುಎಂಸಿಸಿ ಸಭೆ ನಡೆಯಲಿದ್ದು, ಎರಡೂ ರಾಷ್ಟ್ರಗಳು ಸಮಾಲೋಚನೆ ನಡೆಸಿ ಹೊಂದಾಣಿಕೆಗೆ ಬರುವ ನಿರೀಕ್ಷೆಯಿದೆ.
ಭಾರತ-ಚೀನಾ ಗಡಿ ಬಿಕ್ಕಟ್ಟು
ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಯಲ್ಲಿ ಪರಿಸ್ಥಿತಿ ಉಲ್ಬಣಗೊಳಿಸುವ ಮನಸ್ಥಿತಿಯಲ್ಲಿಲ್ಲ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೇಳಿತ್ತು. ಆದರೆ ಪೂರ್ವ ಲಡಾಕ್ ವಲಯದಲ್ಲಿ ಸುಮಾರು 40,000 ಸೈನಿಕರನ್ನು ನಿಯೋಜಿಸುತ್ತಿದೆ. ಹೀಗಾಗಿ ಇಂದು ಉಭಯ ರಾಷ್ಟ್ರಗಳು ಡಬ್ಲ್ಯುಎಂಸಿಸಿ ಸಭೆ ನಡೆಸಿ ಸೇನಾ ತೆರವು ಕಾರ್ಯಾಚರಣೆಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
ಎರಡೂ ದೇಶಗಳು ಈವರೆಗೆ 16 ಡಬ್ಲ್ಯೂಎಂಸಿಸಿ (ವರ್ಕಿಂಗ್ ಮೆಕ್ಯಾನಿಸಂ ಫಾರ್ ಕನ್ಸಲ್ಟೇಷನ್ ಆ್ಯಂಡ್ ಕೋಆರ್ಡಿನೇಷನ್) ಸಭೆ ನಡೆಸಿದ್ದು, ಇಂದು 17ನೇ ಸಭೆ ಆಗಿದೆ.