ನವದೆಹಲಿ:ಚೀನಾ ಹಾಗೂ ಭಾರತದ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಸಮಾಲೋಚನೆ ಮತ್ತು ಸಹಕಾರ ಕಾರ್ಯವಿಧಾನ (ಡಬ್ಲ್ಯೂಎಂಸಿಸಿ) ಸಭೆ ನಾಳೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೊನೆಯ ಡಬ್ಲ್ಯೂಎಂಸಿಸಿ (ವರ್ಕಿಂಗ್ ಮೆಕ್ಯಾನಿಸಂ ಫಾರ್ ಕನ್ಸಲ್ಟೇಷನ್ ಆ್ಯಂಡ್ ಕೋಆರ್ಡಿನೇಷನ್) ಸಭೆ ಕೊನೆಯದಾಗಿ ಜುಲೈ 10ರಂದು ನಡೆದಿದ್ದು, ಚೀನಾ ಹಾಗೂ ಭಾರತದ ನಡುವೆ ಶಾಂತಿ ಸುವ್ಯವಸ್ಥೆ ಸುಧಾರಿಸಲು ಸೇನೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಮಾತುಕತೆಗಳು ಹಾಗೂ ಮಾರ್ಗಸೂಚಿಗಳ ಬಗ್ಗೆ ಎರಡು ರಾಷ್ಟ್ರಗಳು ಈ ಸಭೆಯಲ್ಲಿ ಚರ್ಚೆ ಮಾಡಲಿವೆ.