ಕರ್ನಾಟಕ

karnataka

ETV Bharat / bharat

ಕೊರೊನಾ ಪರೀಕ್ಷೆಗೆ ಐಡಿ ಪ್ರೂಫ್ ಕಡ್ಡಾಯ:  ಐಡಿ ಇಲ್ಲದವರ ಪರೀಕ್ಷೆ ಹೇಗೆ?

ಕೊರೊನಾ ವೈರಸ್ ಪರೀಕ್ಷೆಗೆ ಐಡಿ ಪ್ರೂಫ್ ಸಲ್ಲಿಸಲು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವುದರಿಂದ, ಬಡವರು ಮತ್ತು ಮನೆಯಿಲ್ಲದವರು ಪರೀಕ್ಷೆಗೆ ಒಳಗಾಗುವುದು ಕಷ್ಟವಾಗಿದೆ.

test
test

By

Published : Jun 20, 2020, 8:12 AM IST

ನವದೆಹಲಿ:ಕೊರೊನಾವೈರಸ್ ಪರೀಕ್ಷೆಗೆ ಐಡಿ ಪ್ರೂಫ್ ಸಲ್ಲಿಸುವುದನ್ನ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆ, ಐಡಿ ಪ್ರೂಫ್ ಇಲ್ಲದ ಬಡ ಮತ್ತು ಮನೆಯಿಲ್ಲದ ಜನರು ಹೇಗೆ ಪರೀಕ್ಷೆಗೆ ಒಳಗಾಗುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಸರ್ಕಾರದ ಈ ಕ್ರಮವು ಮನೆ ಇಲ್ಲದವರಿಗೆ ಮತ್ತು ಅಂತಹ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ವೈದ್ಯರಿಗೆ ಬಹಳ ತೊಂದರೆ ಉಂಟುಮಾಡಿದೆ.

ಕೋವಿಡ್-19 ರೋಗಲಕ್ಷಣಗಳಿರುವ ಹಾಗೂ ಕೊರೊನಾ ವೈರಸ್​ ಶಂಕಿತರಾಗಿರುವ ಅನೇಕರು ಐಡಿ ಪ್ರೂಫ್ ಹೊಂದಿರುವುದಿಲ್ಲ. ಹೀಗಾಗಿ ಅವರ ಪರೀಕ್ಷೆ ನಡೆಸಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಜನರನ್ನು ಪರೀಕ್ಷಿಸುವ ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಬೇಕು ಎಂದು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ & ಅಲೈಡ್ ಸೈನ್ಸಸ್​ನ ನಿರ್ದೇಶಕ ಡಾ. ನಿಮೇಶ್ ದೇಸಾಯಿ ಹೇಳಿದ್ದಾರೆ.

ABOUT THE AUTHOR

...view details