ನವದೆಹಲಿ:ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ(PMJAY) ಅಡಿ ಕೋವಿಡ್-19 ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಇಂದಿಗೂ ಹಲವು ದೇಶದ ರಾಜ್ಯಗಳಲ್ಲಿ ನಿರ್ದಿಷ್ಟ ವಿಮಾ ಪ್ಯಾಕೇಜ್ ಘೋಷಣೆಯಾಗಿಲ್ಲ. ಹೀಗಾಗಿ, ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ ದೇಶಾದ್ಯಂತ ಕೋರೋಣ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ಕೊಟ್ಟ ಖಾಸಗಿ ಆಸ್ಪತ್ರೆಗಳು ತಮ್ಮ ಚಿಕಿತ್ಸಾ ವೆಚ್ಚದ ಬಿಲ್ ಪಡೆಯಲು ತೀವ್ರವಾಗಿ ತೊಂದರೆ ಅನುಭವಿಸುತ್ತಿವೆ.
ಕೋವಿಡ್-19 ಚಿಕಿತ್ಸಾ ವೆಚ್ಚ ಎಷ್ಟು ಮತ್ತು ಕ್ಲೈಮ್ ಮಾಡಬಹುಬಹುದಾದ ನಿಗದಿತ ಪ್ಯಾಕೇಜ್ ಮೊತ್ತ ಎಷ್ಟು ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಐಡಿಯಾ ಇಲ್ಲದಿರುವುದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳು ಗೊಂದಲದಲ್ಲಿ ಸಿಲುಕಿವೆ. ಕೊರೋನಾ ರೋಗಿಗಳಿಗೆ ಬೇಡಿದ ಚಿಕಿತ್ಸಾ ವೆಚ್ಚ ಮರು ಪಡೆಯುವ ಕುರಿತಂತೆ ಉಂಟಾಗಿರುವ ಆತಂಕ ಮತ್ತು ಅನಿಶ್ಚಿತತೆತೆಯು ಖಾಸಗಿ ಆಸ್ಪತ್ರೆಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ವ್ಯತಿರಿಕ್ತ
ಪರಿಣಾಮವಾಗಿ, ಅನೇಕ ರಾಜ್ಯಗಳ ಖಾಸಗಿ ಆಸ್ಪತ್ರೆಗಳು, ವಿಮಾ ಉದ್ದೇಶಗಳಿಗಾಗಿ, COVID-19 ರೋಗಿಗಳನ್ನು ‘ಉಸಿರಾಟದ ಸಮಸ್ಯೆ / ವೈಫಲ್ಯ ಪ್ರಕರಣಗಳ’ ಅಡಿಯಲ್ಲಿ ವರ್ಗೀಕರಿಸುತ್ತಿವೆ. “ಸರ್ಕಾರಿ ಆಸ್ಪತ್ರೆಗಳಲ್ಲಿ COVID-19 ಚಿಕಿತ್ಸೆ ಉಚಿತ. ಆದರೆ ಖಾಸಗಿ ಆಸ್ಪತ್ರೆಗಳ ಪರಿಸ್ಥಿತಿ ಈ ರೀತಿಯಾಗಿಲ್ಲ. ಹೆಚ್ಚಿನ ರಾಜ್ಯಗಳಲ್ಲಿ, ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಅಡಿಯಲ್ಲಿ ಯಾವುದೇ ವ್ಯಾಖ್ಯಾನಿಸಲಾದ ನಿರ್ದಿಷ್ಟ COVID-19 ಚಿಕಿತ್ಸಾ ಪ್ಯಾಕೇಜ್ ಇಲ್ಲ.
COVID-19 ಸೋಂಕಿತ ಪ್ರಕರಣಗಳನ್ನು ಹೇಗೆ ದಾಖಲಿಸುವುದು ಎಂಬ ಬಗ್ಗೆ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಗೊಂದಲದಲ್ಲಿವೆ. ಇದಕ್ಕಾಗಿಯೇ ರೋಗಿಗಳನ್ನು ಹೆಚ್ಚಾಗಿ ಉಸಿರಾಟದ ಕಾಯಿಲೆಯ ಅಡಿ ವರ್ಗೀಕರಿಸಲಾಗುತ್ತಿದೆ ”ಎಂದು ಖಾಸಗಿ ವಿಮಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ ಇದಲ್ಲದೇ, ಚಿಕಿತ್ಸೆಯ ವೆಚ್ಚದ ಬಗ್ಗೆ ಜನರಿಗೆ ಖಚಿತ ಮಾಹಿತಿ ಇಲ್ಲ. ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ ಕೊರೊನಾ ವೈರಸ್ ಸೋಂಕಿತ ರೋಗಿಗಳ ಚಿಕಿತ್ಸಗೆ ಒಂದು ನಿಗದಿತ ಪ್ಯಾಕೇಜ್ ಇದ್ದರೆ, ಬಡವರಿಗೆ ಚಿಕಿತ್ಸೆಯ ವೆಚ್ಚದ ಬಗ್ಗೆ ಕನಿಷ್ಠ ಕಲ್ಪನೆ ಇರುತ್ತದೆ ”ಎಂದು ಅಧಿಕಾರಿ ಹೇಳುತ್ತಾರೆ.
ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಅಡಿಯಲ್ಲಿ, ರೋಗಿಯ ವೆಂಟಿಲೇಟರ್ ಶುಲ್ಕಗಳು ಹೆಚ್ಚಾಗಿ ದಿನಕ್ಕೆ 4,500 ರೂ.ವರೆಗೆ ಇರಬಹುದು. ಆದರೆ, COVID-19 ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ಕೊಡುವ ಸಂದರ್ಭದಲ್ಲಿ, ರಕ್ಷಣಾತ್ಮಕ ಸಾಧನಗಳಿಗೆ ಸಂಬಂಧಿಸಿದ ಹೆಚ್ಚುವರಿ ವೆಚ್ಚಗಳಿವೆ, ಇದು ದಿನಕ್ಕೆ 7,000-8,000 ರೂ. ವರೆಗೆ ಆಗಬಹುದು.
ಖಾಸಗಿ ಆಸ್ಪತ್ರೆಗಳು ಗೊಂದಲಕ್ಕೊಳಗಾಗಲು ಕಾರಣಗಳ ಒಂದು ನೋಟ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧಿಕಾರಿಯೊಬ್ಬರ ಪ್ರಕಾರ, ಹೆಚ್ಚಿನ ರಾಜ್ಯ ಸರ್ಕಾರಗಳು, ಎರಡು ತಿಂಗಳ ಲಾಕ್‌ಡೌನ್ ನಂತರವೂ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಿಂದ (ಎನ್‌ಎಚ್‌ಎ) ಕೋವಿಡ್-19 ಚಿಕಿತ್ಸಾ ಪ್ಯಾಕೇಜ್‌ನ ಅನುಮೋದನೆ ಪಡೆಯುವ ಪ್ರಕ್ರಿಯೆಯಲ್ಲಿಯೇ ತೊಡಗಿವೆ. ಅದರ ಭಾಗವಾಗಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ( ಎನ್‌ಎಚ್‌ಎ) ಚಿಕಿತ್ಸಾ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೆ ಚಿಕಿತ್ಸಾ ದರ ಜನರ ಕೈಗೆಟುಕುವಂತೆ ನೋಡಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.
ಉದಾಹರಣೆಗೆ, ಆರ್‌ಟಿ-ಪಿಸಿಆರ್ ಪರೀಕ್ಷೆಯ ಬೆಲೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿಗದಿಪಡಿಸಿರುವ 4,500 ರೂ.ಗಿಂತ ಕಡಿಮೆ ದರದಲ್ಲಿ ನಡೆಸಲು ರಾಜ್ಯಗಳ ಮನವೊಲಿಸಿದೆ. ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯ ಅನುಷ್ಠಾನಕ್ಕೆ ಎನ್‌ಎಚ್‌ಎ ನೋಡಲ್ ಸಂಸ್ಥೆ ಆಗಿದೆ. ಕೋವಿಡ್ ಚಿಕಿತ್ಸಾ ವೆಚ್ಚದ ಬಗ್ಗೆ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮತ್ತು ಎನ್‌ಎಚ್‌ಎ ಸಿಇಒ ಡಾ.ಇಂದು ಭೂಷಣ್ ಅವರನ್ನ ವಿಚಾರಿಸಿದಾಗ, "ಖಾಸಗಿ ಆಸ್ಪತ್ರೆಗಳೊಂದಿಗೆ COVID-19 ಚಿಕಿತ್ಸಾ ಬೆಲೆಗಳ ಬಗ್ಗೆ ಮನವೊಲಿಸಲು ಎನ್‌ಎಚ್‌ಎ ಎಲ್ಲ ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸಲು ಮನವೊಲಿಸುತ್ತಿದೆ." ಎಂದು ತಿಳಿಸಿದ್ದಾರೆ.
ಆದರೂ, ಬಹುತೇಕ ಕೋವಿಡ್-೧೯ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುತ್ತಾರೆ ಡಾ. ಭೂಷಣ್, ಇದುವರೆಗೆ ಮೊರೋನಾ ವೈರಸ್ ಚಿತ್ಸೆಯಲ್ಲಿ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯ ಪ್ರಮುಖ ಪಾತ್ರವಿಲ್ಲ ಎಂಬುದು ಸತ್ಯ. ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಮಾತ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಕಷ್ಟವಾಗಬಹುದು. ಅವಾಗ ಮಾತ್ರ ಖಾಸಗಿ ಆಸ್ಪತ್ರೆಗಳನ್ನ ಚಿಕಿತ್ಸೆಗೆ ಸಜ್ಜುಗೊಳಿಸಬೇಕಾಗುತ್ತದೆ ಎನ್ನುತ್ತಾರೆ ಡಾಕ್ಟರ್ ಭೂಷಣ್. ಜೊತೆಗೆ ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ ಎಂಬುದನ್ನ ಒಪ್ಪಿಕೊಂಡಿರುವ ಅವರು, ಭಾರೀ ಪ್ರಮಾಣದ ಆರ್ಥಿಕ ಕುಸಿತದಿಂದ ಅನೇಕ ಖಾಸಗಿ ಆಸ್ಪತ್ರೆಗಳು ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಆಸ್ಪತ್ರೆಗೆಬಂಡವಾಳವನ್ನು ಕಂಡುಹಿಡಿಯಲು ಹೆಣಗಾಡುತ್ತಿವೆ.
"ಎಲ್ಲಾ ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಜೊತೆ ನಡೆಸುತ್ತಿರುವ ಮಾತುಕತೆ ಫಲಪ್ರದವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಲಾಕ್ ಡೌನ್ ಬಳಿಕ ನಿರಂತರವಾಗಿ, ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಅಡಿ ಎಲ್ಲಾ ಚಿಕಿತ್ಸೆಗಳು ಕಳೆದ ಎರಡು ತಿಂಗಳುಗಳಲ್ಲಿ ತೀವ್ರ ಕುಸಿತ ಕಂಡಿದೆ. “ ಆಗಸ್ಟ್ 2019 ಮತ್ತು ಫೆಬ್ರವರಿ 2020 ರ ನಡುವಿನ ಮಾಸಿಕ ಸರಾಸರಿ 7.4 ಲಕ್ಷ ಮಂದಿಯಷ್ಟಿದ್ದ ಆಸ್ಪತ್ರೆಗೆ ದಾಖಲು ಮತ್ತು ಆರೋಗ್ಯ ಪ್ರಕ್ರಿಯೆಗಳ, ಈ ಸಂಖ್ಯೆ 2020 ರ ಮಾರ್ಚ್‌ನಲ್ಲಿ ಶೇಕಡಾ 57 ರಷ್ಟು ಇಳಿದು 3.2 ಲಕ್ಷಕ್ಕೆ ಇಳಿದಿದೆ. ಇದು ಏಪ್ರಿಲ್‌ನಲ್ಲಿ 84 ಪ್ರತಿಶತದಷ್ಟು ಕುಸಿದು 53,000 ಕ್ಕೆ ಇಳಿದಿದೆ ಎಂದಿದ್ದಾರೆ.
ಈ ರೀತಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಕುಸಿತಕ್ಕೆ ರಾಷ್ಟ್ರೀಯ ಆರೋಗ್ಯ ದೃಷ್ಟಿಯಿಂದ ವಿಧಿಸಿದ ಲಾಕ್ ಡೌನ್ ಕಾರಣವಾಗಿದೆ. ಈ ಸಮಯದಲ್ಲಿ ವೈರಸ್ ಹರಡುವ ಭಯದಿಂದ ರೋಗಿಗಳು ಚಿಕಿತ್ಸೆಗೆ ಮುಂದೆ ಬಂದಿಲ್ಲ. ಜೊತೆಗೆ, ಹಲವು ಸರ್ಕಾರಿ ಆಸ್ಪತ್ರೆಗಳನ್ನ ಸಹ ಕೋವಿಡ್ ಚಿಕಿತ್ಸೆಗೆ ಸೀಮಿತಗೊಳಿಸಲಾಗಿತ್ತು. ಆದರೂ, ಡಯಾಲಿಸಿಸ್, ಕೀಮೋಥೆರಪಿ ರೀತಿಯ ಹೆಚ್ಚಿನ ಅಪಾಯಕಾರಿ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಳ ಸಂಖ್ಯೆ ಕೇವಲ 10-15ರಷ್ಟು ಕಡಿಮೆಯಾಗಿದೆ.