ನವದೆಹಲಿ:ರಾಷ್ಟ್ರೀಯ ಭದ್ರತೆಗಾಗಿ ಚೀನಾದ ಹೂಡಿಕೆಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರ, 2017ರ ಸಾಮಾನ್ಯ ಹಣಕಾಸು ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಭಾರತದ ರಕ್ಷಣೆಯ ಆಧಾರದ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ಹಾಗೂ ಗಡಿ ವಿವಾದ ಹೊಂದಿರುವ ದೇಶಗಳು ಹೂಡಿಕೆ ಮಾಡುವುದನ್ನು ನಿರ್ಬಂಧ ಹೇರಲು ಸಾಧ್ಯವಾಗುವಂತೆ ತಿದ್ದುಪಡಿ ಮಾಡಲಾಗಿದೆ.