ನವದೆಹಲಿ: ಕಳೆದ 24 ಗಂಟೆಗಳಲ್ಲಿ 9,440 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದು, ಭಾರತದ ಕೊರೊನಾ ಚೇತರಿಕೆ ಪ್ರಮಾಣ ಶೇ.55.77 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 9,440 ಕೋವಿಡ್-19 ರೋಗಿಗಳು ಗುಣಮುಖ - ಭಾರತದ ಕೊರೊನಾ ಚೇತರಿಕೆ ಪ್ರಮಾಣ
ಈವರೆಗೆ ಒಟ್ಟು 2,37,195 ರೋಗಿಗಳು ಕೋವಿಡ್-19 ನಿಂದ ಗುಣಮುಖರಾಗಿದ್ದಾರೆ. ಕೊರೊನಾ ರೋಗಿಗಳ ಚೇತರಿಕೆ ಪ್ರಮಾಣ 55.77 ರಷ್ಟಿದೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ.

ಕೋವಿಡ್-19 ರೋಗಿಗಳು ಗುಣಮುಖ
"ಕಳೆದ 24 ಗಂಟೆಗಳಲ್ಲಿ ಒಟ್ಟು 9,440 ಕೊರೊನಾ ರೋಗಿಗಳನ್ನು ಗುಣಪಡಿಸಲಾಗಿದೆ. ಈವರೆಗೆ ಒಟ್ಟು 2,37,195 ರೋಗಿಗಳು ಕೋವಿಡ್-19 ನಿಂದ ಗುಣಮುಖರಾಗಿದ್ದಾರೆ. ಕೊರೊನಾ ರೋಗಿಗಳ ಚೇತರಿಕೆ ಪ್ರಮಾಣ 55.77 ರಷ್ಟಿದೆ" ಎಂದು ಸಚಿವಾಲಯ ಟ್ವೀಟ್ ಮಾಡಿದೆ.
ಚೇತರಿಸಿಕೊಂಡ ಮತ್ತು ಸಕ್ರಿಯವಾದ ಕೊರೊನಾ ಪ್ರಕರಣಗಳ ನಡುವಿನ ಅಂತರವನ್ನು ಭಾರತವು ವಿಸ್ತರಿಸುತ್ತಲೇ ಇದೆ. ಒಂದು ಲಕ್ಷ ಜನಸಂಖ್ಯೆಗೆ ಸುಮಾರು 30 ಕೊರೊನಾ ಪ್ರಕರಣಗಳಿವೆ. ಜಾಗತಿಕ ಸರಾಸರಿ ಅದರ ಮೂರು ಪಟ್ಟು ಅಂದರೆ 114.67 ರಷ್ಟಿದೆ ಎಂದು ಸಚಿವಾಲಯವು ಟ್ವೀಟ್ನಲ್ಲಿ ತಿಳಿಸಿದೆ.