ಚಂಡೀಗಢ: ಹರಿಯಾಣದಲ್ಲಿ ಭಾನುವಾರ 66 ಹೊಸ ಕೊರೊನಾ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 442ಕ್ಕೆ ತಲುಪಿದೆ.
ಹರಿಯಾಣದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ: ಭಾನುವಾರ ಒಂದೇ ದಿನ 66 ಜನರಿಗೆ ಪಾಸಿಟಿವ್ - ಹರಿಯಾಣದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ
ಹರಿಯಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಏಪ್ರಿಲ್ 30 ಬಳಿಕ ಅತೀ ಹೆಚ್ಚು 66 ಹೊಸ ಪ್ರಕರಣಗಳು ಭಾನುವಾರ ದಾಖಲಾಗಿವೆ.

ಹೊಸ ಪ್ರಕರಣಗಳಲ್ಲಿ ಹೆಚ್ಚಿನವು ಎನ್ಸಿಆರ್ ಜಿಲ್ಲೆಗಳಾದ ಫರಿದಾಬಾದ್, ಗುರ್ಗಾಂವ್, ಸೋನಿಪತ್ ಮತ್ತು ಜಜ್ಜರ್ನಲ್ಲಿ ದಾಖಲಾಗಿವೆ. ಸೋನಿಪತ್‌ನಲ್ಲಿ 18, ಫರಿದಾಬಾದ್‌ನಲ್ಲಿ 12, ಗುರ್ಗಾಂವ್ನಲ್ಲಿ 9, ಪಾಣಿಪತ್‌ನಲ್ಲಿ 11, ಜಜ್ಜರ್ ಮತ್ತು ಪಾಲ್ವಾಲ್ನಲ್ಲಿ ತಲಾ 2, ಫತೇಹಾಬಾದ್‌ನಲ್ಲಿ 4, ಯಮುನಾನಗರದಲ್ಲಿ 2 ಮತ್ತು ಜಿಂದ್‌ನಲ್ಲಿ 6 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.
ಮಹಾರಾಷ್ಟ್ರದ ನಾಂದೇಡ್‌ನ ಹಜೂರ್ ಸಾಹಿಬ್ ಗುರುದ್ವಾರದಿಂದ ಆಗಮಿಸಿದ ಸೋನಿಪತ್‌ನ ಮೂವರು ವೈದ್ಯರು, ಪಾಣಿಪತ್‌ನ ನಾಲ್ವರು ಲೇಖಕರು ಮತ್ತು ಫತೇಹಾಬಾದ್‌ನ ನಾಲ್ಕು ಯಾತ್ರಾರ್ಥಿಗಳು ಇದರಲ್ಲಿ ಒಳಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಚೇತರಿಕೆಯ ಪ್ರಮಾಣದಲ್ಲಿ ಹರಿಯಾಣ ಉತ್ತಮ ಮಟ್ಟದಲ್ಲಿತ್ತು. ಆದರೆ, ಭಾನುವಾರ ಅತೀ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಈ ಮಟ್ಟ ಶೇ.72 ರಿಂದ 55.43ರಕ್ಕೆ ಇಳಿದಿದೆ.