ಕರ್ನಾಟಕ

karnataka

ETV Bharat / bharat

247 ಮೀಟಿಂಗ್​, 4 ರೋಡ್ ಶೋ, 12 ಸಾರ್ವಜನಿಕ ಸಭೆ: ದಾಖಲೆ ಬರೆದ ತೇಜಸ್ವಿ ಯಾದವ್​! - ಚುನಾವಣೆ ವೇಳೆ ದಾಖಲೆ ಬರೆದ ತೇಜಸ್ವಿ ಯಾದವ್​

ಬಿಹಾರ ಚುನಾವಣೆ ಇದೀಗ ಕೊನೆ ಹಂತಕ್ಕೆ ಬಂದು ನಿಂತಿದ್ದು, ನವೆಂಬರ್​ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಇದರ ಮಧ್ಯೆ ಬಿಹಾರ ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಹೊಸ ದಾಖಲೆ ಬರೆದಿದ್ದಾರೆ.

Tejashwi Yadav
Tejashwi Yadav

By

Published : Nov 7, 2020, 4:54 PM IST

ಪಾಟ್ನಾ: 243 ಕ್ಷೇತ್ರಗಳ ಬಿಹಾರದಲ್ಲಿ ಇಂದು ಕೊನೆ ಹಂತದ ವಿಧಾನಸಭೆ ವೋಟಿಂಗ್ ನಡೆಯುತ್ತಿದ್ದು, ನವೆಂಬರ್​ 10ರಂದು ಫಲಿತಾಂಶ ಹೊರಬೀಳುವ ಮೂಲಕ ವಿವಿಧ ಪಕ್ಷಗಳ ಹಣೆಬರಹ ಗೊತ್ತಾಗಲಿದೆ. ಇದರ ಮಧ್ಯೆ ಅಬ್ಬರದ ಪ್ರಚಾರ ನಡೆಸಿರುವ ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.

ಚುನಾವಣೆ ಘೋಷಣೆಯಾದಾಗಿನಿಂದಲೂ ಅವರು ಬರೋಬ್ಬರಿ 247 ಮೀಟಿಂಗ್​, ನಾಲ್ಕು ರೋಡ್ ಶೋ ಹಾಗೂ 12 ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರ್​ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಮಾಹಿತಿ ನೀಡಿದ್ದು, ನಿತ್ಯ ತೇಜಸ್ವಿ ಯಾದವ್​ 12ಕ್ಕಿಂತಲೂ ಅಧಿಕ ಮೀಟಿಂಗ್​ಗಳಲ್ಲಿ ಭಾಗಿಯಾಗಿದ್ದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್​ ಗಾಂಧಿ 8 ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಹಾಘಟಬಂಧನ್​ ಪರ ಮತಯಾಚನೆ ಮಾಡಿದ್ದು, ಸುರ್ಜೇವಾಲ್​ 20 ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಆದರೆ, ಪ್ರಿಯಾಂಕಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಪ್ರಚಾರದಿಂದ ಹೊರಗುಳಿದಿದ್ದರು.

ಬಿಹಾರ ಸಿಎಂ ನಿತೀಶ್​ ಕುಮಾರ್​ 160ಕ್ಕಿಂತಲೂ ಅಧಿಕ ಸಭೆಗಳಲ್ಲಿ ಭಾಗಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆರು ಸಭೆಯಲ್ಲಿ ಪ್ರಚಾರ ಮಾಡಿದ್ದು, ಒಟ್ಟು 12 ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ 22, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ 19 ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದು, ಇವರ ಜತೆಗೆ ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಸ್ಮೃತಿ ಇರಾನಿ, ಅನುರಾಗ್​ ಠಾಕೂರ್​, ಧರ್ಮೇಂದ್ರ ಪ್ರದಾನ್​ ಕೂಡ ಪ್ರಚಾರ ನಡೆಸಿದ್ದಾರೆ.

ABOUT THE AUTHOR

...view details